ಮುಂಬಯಿ : ನಿರಂತರ ನಾಲ್ಕನೇ ದಿನ ಜಾರು ಹಾದಿಯಲ್ಲಿ ಸಾಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 160 ನಷ್ಟಕ್ಕೆ ಗುರಿಯಾಯಿತು. ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ತೋರಿಬಂದಿರುವುದೇ ಈ ಹಿನ್ನಡೆಗೆ ಕಾರಣವೆಂದು ತಿಳಯಲಾಗಿದೆ.
ಬೆಳಗ್ಗೆ 10.45ರ ಹೊತ್ತಿಗೆ ಸೆನೆಕ್ಸ್ ಕೊಂಚ ಮಟ್ಟಿನ ಚೇತರಿಕೆಯನ್ನು ಕಂಡು 125.92 ಅಂಕಗಳ ನಷ್ಟದೊಂದಿಗೆ 31,671.92 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 45.05 ಅಂಕಗಳ ನಷ್ಟದೊಂದಿಗೆ 9,863.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಟಾಟಾ ಮೋಟರ್, ಅರಬಿಂದೋ ಫಾರ್ಮಾ, ಆ್ಯಕ್ಸಿಸ್ ಬ್ಯಾ,ಕ್, SBI, ಸನ್ ಫಾರ್ಮಾ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಅರಂಬಿಂದೋ ಫಾರ್ಮಾ , ಟೆಕ್ ಮಹೀಂದ್ರ, ಲೂಪಿನ್, ಡಾ. ರೆಡ್ಡಿ, ಸನ್ ಫಾರ್ಮಾ ಶೇರುಗಳು ವಿಜೃಂಭಿಸಿದರೆ ಟಾಪ್ ಲೂಸರ್‌ಗಳಾಗಿ ಟಾಟಾ ಮೋಟರ್ (ಡಿ), ಟಾಟಾ ಮೋಟರ್, ಈಶರ್ ಮೋಟರ್, ಬಿಪಿಸಿಎಲ್ ಮತ್ತು ಒಎನ್‌ಜಿಸಿ ಶೇರುಗಳು ಕಾಣಿಸಿಕೊಂಡವು.
ಮಾರುಕಟ್ಟೆ ಹರಹು ಇಂದಿನ ಆರಂಭಿಕ ವಹಿವಾಟಿನಲ್ಲಿ ದುರ್ಬಲವಾಗಿತ್ತು. ವಹಿವಾಟಿಗೆ ಒಳಪಟ್ಟಿದ್ದ 2,176 ಶೇರುಗಳ ಪೈಕಿ 462 ಶೇರುಗಳು ಮಾತ್ರವೇ ಮುನ್ನಡೆ ಸಾಧಿಸಿದವು; 1,643 ಶೇರುಗಳು ಹಿನ್ನಡೆಗೆ ಗುರಿಯಾದವು. 71 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.