ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದಿರುವ ಮಿಶ್ರ ಪ್ರತಿಕ್ರಿಯೆಯ ನಡುವೆ ಇಂದು ಬಿಡುಗಡೆಗೊಳ್ಳಲಿರುವ ಹಣದುಬ್ಬರ ಮತ್ತು ಕೈಗಾರಿಕಾ ಉತ್ಪಾದನಾ ಅಂಕಿ ಅಂಶಗಳು ಆಶಾದಾಯಕವಾಗಿರಲಿವೆ ಎಂಬ ವಿಶ್ವಾಸದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 73 ಅಂಕಗಳ ಜಿಗಿತವನ್ನು ಸಾಧಿಸಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,800 ಅಂಕಗಳ ಮನೋಪ್ರಾಬಲ್ಯದ ಮಟ್ಟವನ್ನು ಪುನರ್ ಸಂಪಾದಿಸಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 55.86 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 31,802.95 ಅಂಕಗಳ ಮಟ್ಟದಲ್ಲೂ, ನಿಫ್ಟಿ 23.65 ಅಂಕಗಳ ಮುನ್ನಡೆಯೊಂದಿಗೆ 9,809.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಸೆನ್ಸೆಕ್ಸ್ ಕಳೆದೆರಡು ದಿನಗಳ ವಹಿವಾಟಿನಲ್ಲಿ ಒಟ್ಟಾರೆಯಾಗಿ 386.45 ಅಂಕಗಳ ಏರಿಕೆಯನ್ನು ಸಾಧಿಸಿ ಸಾರ್ವಕಾಲಿಕ ಹೊಸ ಎತ್ತರವಾಗಿ 31,747.09ರ ಮಟ್ಟವನ್ನು ತಲುಪಿತ್ತು.
ರಿಲಯನ್ಸ್, ಎಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಟಿಸಿಎಸ್ ಐಟಿಸಿ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಎಚ್‌ಯುಎಲ್, ಎಸಿಸಿ, ರಿಲಯನ್ಸ್, ಒಎನ್‌ಜಿಸಿ ಮತ್ತು ಅಂಬುಜಾ ಸಿಮೆಂಟ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು; ಟಿಸಿಎಸ್, ಬ್ಯಾಂಕ್ ಆಫ್ ಬರೋಡ, ಅರಬಿಂದೋ ಫಾರ್ಮಾ, ಬಜಾಜ್ ಆಟೋ, ಎಚ್ ಡಿ ಎಫ್ ಸಿ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.