ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವ ನಡುವೆಯೇ ಭಾರತೀಯ ಕೈಗಾರಿಕಾ ರಂಗದ ದಿಗ್ಗಜಗಳಲ್ಲಿ ಒಂದೆಂದು ಖ್ಯಾತಿವೆತ್ತಿರುವ ಟಾಟಾ ಸ್ಟೀಲ್ ನಿರೀಕ್ಷೆಗಿಂತ ಉತ್ತಮವಾದ ಮೊದಲ ತ್ತೈಮಾಸಿಕ ಫಲಿತಾಂಶವನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಉತ್ತಮ ತೇಜಿಯನ್ನು ಸಾಧಿಸಿತು.
ಆದರೆ ತದನಂತರದ ಬೆಳವಣಿಗೆಯಲ್ಲಿ ಬೆಳಗ್ಗೆ 11.00 ಗಂಟೆಯ ಹೊತ್ತಿಗೆ 240.35 ಅಂಕಗಳ ನಷ್ಟಕ್ಕೆ ಗುರಿಯಾಗಿ 32,033.32 ಅಂಕಗಳ ಮಟ್ಟಕ್ಕೆ ಜಾರುವ ಮೂಲಕ ನಿರಾಶೆ ಉಂಟುಮಾಡಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 71.85 ಅಂಕಗಳ ನಷ್ಟಕ್ಕೆ ಗುರಿಯಾಗಿದ 9,985.55 ಅಂಕಗಳ ಮಟ್ಟಕ್ಕೆ ಕುಸಿಯಿತು.
ಟಾಟಾ ಸ್ಟೀಲ್, ಭಾರ್ತಿ ಇನ್‌ಫ್ರಾಟೆಲ್, ಹಿಂಡಾಲ್ಕೋ, ವೇದಾಂತ, ರಿಲಯನ್ಸ್ ಶೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಹಿಂಡಾಲ್ಕೊ, ವೇದಾಂತ, ಟಾಟಾ ಸ್ಟೀಲ್, ಎಚ್‌ಯುಎಲ್, ಬಜಾಜ್ ಆಟೋ ಶೇರುಗಳು ವಿಜೃಂಭಿಸಿದವು; ಟಾಪ್ ಲೂಸರ್‌ಗಳಾಗಿ ಭಾರ್ತಿ ಇನ್‌ಫ್ರಾಟೆಲ್, ಬಿಪಿಸಿಎಲ್, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡ, ಟೆಕ್ ಮಹೀಂದ್ರ ಶೇರುಗಳು ನಿರಾಶೆ ಉಂಟುಮಾಡಿದವು.
ಬೆಳಗ್ಗಿನ ವಹಿವಾಟಿನಲ್ಲಿ 482 ಶೇರುಗಳು ಮುನ್ನಡೆ ಸಾಧಿಸಿದರೆ, 1,693 ಶೇರುಗಳು ಹಿನ್ನಡೆಗೆ ಗುರಿಯಾದವು ಮತ್ತು 82 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.