ಮುಂಬಯಿ : ಭಾರತದ ಔದ್ಯಮಿಕ ಕ್ಷೇತ್ರದ ದಿಗ್ಗಜ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಗರಿಷ್ಠ ತ್ತೈಮಾಸಿಕ ಆದಾಯವನ್ನು ಘೋಷಿಸಿ ಬೋನಸ್ ಶೇರು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಇಂದು ಶುಕ್ರವಾರದ ವಹಿವಾಟನ್ನು 124 ಅಂಕಗಳ ಏರಿಕೆಯೊಂದಿಗೆ ಕೊನೆಗೊಳಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,900 ಅಂಕಗಳ ಮಟ್ಟವನ್ನು ದಾಟುವ ಸಾಧನೆ ಮಾಡಿತು.
ದಿನಾಂತ್ಯದಲ್ಲಿ ಸೆನ್ಸೆಕ್ಸ್ 124.49 ಅಂಕಗಳ ಏರಿಕೆಯೊಂದಿಗೆ 32,028.89 ಅಂಕಗಳ ಮಟ್ಟದಲ್ಲಿ ಹಾಗೂ ನಿಫ್ಟಿ 41.95 ಅಂಕಗಳ ಏರಿಕೆಯೊಂದಿಗೆ 9,838 ಅಂಕಗಳ ಮಟ್ಟದಲ್ಲಿ ನೆಲೆಗೊಂಡವು.
ಈ ವಾರದಲ್ಲಿ ಸೆನ್ಸೆಕ್ಸ್‌ನ ಗಳಿಕೆ 8.14 ಅಂಕವಾದರೆ ನಿಫ್ಟಿ ಗಳಿಕೆ 28.90 ಅಂಕ. ಇಂದು ರಿಲಯನ್ಸ್ ಶೇರು ಶೇ.3.76ರಷ್ಟು ಏರಿರುವುದು ದಾಖಲೆ.
ಇಂದಿನ ಟಾಪ್ ಗೇನರ್‌ಗಳು : ವಿಪ್ರೋ, ರಿಲಯನ್ಸ್, ಝಿ ಎಂಟರ್‌ಟೇನ್‌ಮೆಂಟ್, ಕೋಲ್ ಇಂಡಿಯಾ, ಎಚ್‌ಸಿಎಲ್ ಟೆಕ್.
ಟಾಪ್ ಲೂಸರ್‌ಗಳು : ಐಡಿಯಾ ಸೆಲ್ಯುಲರ್, ಭಾರ್ತಿ ಏರ್‌ಟೆಲ್, ಲೂಪಿನ್, ಪವರ್‌ಗ್ರಿಡ್ ಕಾರ್ಪ್, ಹೀರೋ ಮೋಟೋಕಾರ್ಪ್.