ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿರುವ ಹೊರತಾಗಿಯೂ ಜಿಎಸ್‌ಟಿ ಜಾರಿಗೊಂಡ ಉತ್ಸಾಹದಲ್ಲಿ ಇಂದು ಸೋಮವಾರದ ಆರಂಭಿಕ ವಹಿವಾಟನಲ್ಲಿ 337 ಅದ್ಭುತ ಜಿಗಿತ ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 31,258.33 ಅಂಕಗಳ ಮಟ್ಟಕ್ಕೆ ನೆಗೆಯಿತು.
ಆದರೆ 11 ಗಂಟೆಯ ಹೊತ್ತಿಗೆ ತನ್ನ ಆರಂಭಿಕ ಗಳಿಕೆಯ ಬಹುಪಾಲನ್ನು ಬಿಟ್ಟುಕೊಟ್ಟ ಸೆನ್ಸೆಕ್ಸ್ 296.88 ಅಂಕಗಳ ಮುನ್ನಡೆಯನ್ನು ಕಾಯ್ದಕೊಂಡು 31,218.49 ಅಂಕಗಳ ಮಟ್ಟಕ್ಕೆ ಇಳಿಯಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 82.85 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂದು 9,603.75 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಐಟಿಸಿ, ಮಾರುತಿ ಸುಜುಕಿ, ಟಾಟಾ ಸ್ಟೀಲ್, ರಿಲಯನ್ಸ್, ಹಿಂಡಾಲ್ಕೋ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಇಂದಿನ ಟಾಪ್ ಗೇನರ್‌ಗಳು : ಐಟಿಸಿ, ಭಾರ್ತಿ ಇನ್‌ಫ್ರಾಟೆಲ್, ಹಿಂಡಾಲ್ಕೋ, ವೇದಾಂತ ಮತ್ತು ಮಹೀಂದ್ರ; ಟಾಪ್ ಲೂಸರ್‌ಗಳು : ಎನ್‌ಟಿಪಿಸಿ, ಎಚ್‌ಸಿಎಲ್ ಟೆಕ್, ವಿಪ್ರೋ, ಬಜಾಜ್ ಆಟೋ, ಸನ್ ಫಾರ್ಮಾ.