ಚುನಾವಣೆಯ ಪ್ರಧಾನ ಅಂಶವೆಂದರೆ ಮಾಜಿ ಸಿಎಂ, ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ಪ್ರಭಾವ ಇಲ್ಲದೆಯೇ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದು!
Advertisement
ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಪಾಲಿಕೆಗಳ ಪೈಕಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಮಾತ್ರ ಅಧಿಕಾರದಲ್ಲಿದ್ದ ಬಿಜೆಪಿ ಈ ಬಾರಿ ಮೂರು ಪಾಲಿಕೆಯಲ್ಲಿ ಅಧಿಕಾರಕ್ಕೆ ಸಿದ್ಧವಾಗಿದೆ.
ಹೇಳಿಕೊಂಡಿದ್ದರು. ರಾಜೀನಾಮೆಕೊಟ್ಟ ನಂತರ, ಅವರ ನೆರಳಿನಿಂದ ಹೊರತರಲು ರಾಷ್ಟ್ರೀಯ ನಾಯಕರು ಪರೋಕ್ಷವಾಗಿ ಪ್ರಯತ್ನ ಮಾಡುತ್ತಿ ದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಡಿಜಿಟಲೈಸ್ಡ್ ವ್ಯವಸ್ಥೆ ಜಾರಿ: ಸಚಿವ ಮಾಧುಸ್ವಾಮಿ
Related Articles
Advertisement
ಕಲಬುರಗಿ ಪಾಲಿಕೆಯಲ್ಲಿ ಬಿಎಸ್‌ವೈ ಪ್ರಭಾವ ಇಲ್ಲದೇ ಇದೇ ಮೊದಲ ಬಾರಿಗೆ ಅಧಿಕಾರದ ಗದ್ದುಗೆಹಿಡಿಯುತ್ತಿದ್ದಾರೆ. ಸ್ವತಃ ಯಡಿಯೂರಪ್ಪಜೆಡಿಎಸ್ ಜೊತೆ ಮೈತ್ರಿ ಅಗತ್ಯವಿಲ್ಲ ಎಂದಿದ್ದರೂ, ಆ ಪಕ್ಷದ ಜೊತೆಗೆ ಮೈತ್ರಿಗೆ ಮುಂದಾಗಿರುವುದು ಪರೋಕ್ಷವಾಗಿ ಅವರ ಸೂಚನೆಯನ್ನು
ಕಡೆಗಣಿಸುತ್ತಿರುವುದರ ಸಂಕೇತವಾಗಿದೆ ಎಂಬ ಮಾತುಗಳುಕೇಳಿ ಬರುತ್ತಿವೆ ಅಮಿತ್ ಶಾ ಸಂದೇಶ
ಚುನಾವಣೆಯ ಸಂದರ್ಭದಲ್ಲಿ ಬೇರೆಕಾರ್ಯ ಕ್ರಮಗಳಿಗೆ ಆಗಮಿಸಿದ್ದಕೇಂದ್ರ ಗೃಹ ಸಚಿವ ಅಮಿತ್ ಶಾಮುಂದಿನ ವಿಧಾನಸಭೆ ಚುನಾವಣೆ ಯನ್ನುಹಾಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದಲ್ಲಿಯೇ ಎದುರಿಸಲಾಗುವುದು ಎಂದು ಹೇಳಿರುವುದು ಪಾಲಿಕೆ ಚುನಾವಣೆಗಳ ಮೇಲೆ ಪರಿಣಾಮ ಬೀರಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಮೂರು ಮಹಾನಗರ ಪಾಲಿಕೆಗಳು ಉತ್ತರಕರ್ನಾಟಕ
ವ್ಯಾಪ್ತಿಯಲ್ಲಿವೆ. ಬೊಮ್ಮಾಯಿ ಅವರೂಈ ಕಡೆಯವರೇ ಆಗಿದ್ದಾರೆ.ಹೀಗಾಗಿಯೇ ಮತದಾರರ ಮೇಲೆ ಪ್ರಭಾವ ಬೀರಲೆಂದೇ ಅಮಿತ್ ಶಾ ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಪಾಲಿಕೆ ಫಲಿತಾಂಶ ಬಂದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಬಹುತೇಕ ನಾಯಕರುಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ.ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನ ಇರುತ್ತದೆ ಎನ್ನುವ ಮೂಲಕ ಪಕ್ಷವನ್ನು ಅವರ ನೆರಳಿನಿಂದ ಹೊರ ತರುವ ಪ್ರಯತ್ನಇದಾಗಿದೆ ಎನ್ನಲಾಗಿದೆ. -ಶಂಕರ ಪಾಗೋಜಿ