Advertisement

ಪಾಟೀಲ್ ಗೆ BJP ಗಾಳ-ಡೀಲ್ ಬಯಲು! ಮತ್ತೊಂದು ಆಡಿಯೋ ರಿಲೀಸ್

03:25 PM May 19, 2018 | Sharanya Alva |

ಬೆಂಗಳೂರು: ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಒಂದರ ಹಿಂದೆ ಮತ್ತೊಂದು ಆಡಿಯೋವನ್ನು ರಿಲೀಸ್ ಮಾಡುತ್ತಿದೆ. ಇದೀಗ ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್  ಜತೆ ಬಿಜೆಪಿ ಶಾಸಕ ಶ್ರೀರಾಮುಲು ಮತ್ತು ಮುರಳೀಧರ್ ರಾವ್ ಬಿಜೆಪಿಗೆ ಸೆಳೆಯಲು ಯತ್ನಿಸಿರುವ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

Advertisement

ಮುರಳೀಧರ್ ರಾವ್ ಮತ್ತು ಶ್ರೀರಾಮುಲು ಅವರು ಬಿಸಿ ಪಾಟೀಲ್ ಗೆ ಆಮಿಷವೊಡ್ಡಿದ್ದ ಆಡಿಯೋವನ್ನು ಬಿಡುಗಡೆ ಮಾಡಿದ್ದು,25 ಕೋಟಿ ರೂಪಾಯಿ ಆಫರ್ ಮಾಡಿರುವುದು ಆಡಿಯೋದಲ್ಲಿ ದಾಖಲಾಗಿದೆ.

ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪನವರೇ ಖುದ್ದು ಬಿಸಿ ಪಾಟೀಲ್ ಗೆ ಕರೆ ಮಾಡಿದ್ದಾರೆನ್ನಲಾದ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು.

ಸ್ಪೀಕರ್ ಡೀಲ್ ಬಯಲು!

ಸ್ಪೀಕರ್ ಯಾರಾಗಬೇಕೆಂಬ ಬಗ್ಗೆಯೂ ಶಾಸಕ ಶ್ರೀರಾಮುಲು ಅವರು ಮಾತನಾಡಿದ್ದರೆನ್ನಲಾದ ಆಡಿಯೋವನ್ನು ಕೂಡಾ ಕಾಂಗ್ರೆಸ್ ಬಿಡುಗಡೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next