Advertisement

ಅಮ್ರುಲ್ಲಾ ಸಲೇಹ್‌ ಸಹೋದರನ ಹತ್ಯೆ

12:08 AM Sep 12, 2021 | Team Udayavani |

ಕಾಬೂಲ್‌: ಆಫ್ಘಾನಿಸ್ಥಾನದ ಪಂಜ್‌ಶೀರ್‌ ಪ್ರಾಂತ್ಯದಲ್ಲಿ ತಾಲಿಬಾನಿಗಳ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಅಫ್ಘಾನ್‌ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ನ ಸಹೋದರನನ್ನು ತಾಲಿಬಾನಿಗಳು ಗುಂಡಿಕ್ಕಿ ಕೊಂದಿದ್ದಾರೆ.

Advertisement

ಈ ಬಗ್ಗೆ ಸಲೇಹ್‌ನ ಅಳಿಯ ಶುರೇಶ್‌ ಸಲೇಹ್‌ ಮಾಹಿತಿ ನೀಡಿದ್ದಾರೆ. ರೊಹುಲ್ಲಾ ಅಜೀಜಿ ಗುರುವಾರದಂದು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಚೆಕ್‌ಪೋಸ್ಟ್‌ ಒಂದರಲ್ಲಿ ಅವರನ್ನು ಅಡ್ಡಗಟ್ಟಿದ ತಾಲಿಬಾನಿಗಳು ಅವರಿಗೆ ಗುಂಡು ಹಾರಿಸಿದ್ದಾರೆ.

ಕಾರಿನಲ್ಲಿದ್ದ ಚಾಲಕನಿಗೂ ಗುಂಡಿಟ್ಟು ಕೊಲೆ ಮಾಡಲಾಗಿದೆ. ರೊಹುಲ್ಲಾ ಕೂಡ ತಾಲಿಬಾನಿಗಳ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಅವರ ಕೊಲೆಯಾದ ದಿನ ಯಾವ ಕಾರಣಕ್ಕೆ ಯಾವ ಸ್ಥಳಕ್ಕೆ ಹೋಗುತ್ತಿದ್ದರು ಎನ್ನುವುದು ನಮಗೂ ತಿಳಿದಿರಲಿಲ್ಲ ಎಂದು ಅಳಿಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next