ಜಮೈಕಾ: ಪ್ರವಾಸಿ ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಜಯ ಸಾಧಿಸಿದೆ. ಮೊದಲ ಪಂದ್ಯವಾಡುತ್ತಿರುವ ಬ್ರೂಕ್ಸ್ ಮತ್ತು ನಾಯಕ ಪೊಲಾರ್ಡ್ ಉತ್ತಮ ಬ್ಯಾಟಿಂಗ್ ನಿಂದ ವಿಂಡೀಸ್ ತಂಡ 24 ರನ್ ಅಂತರದ ಜಯ ಗಳಿಸಿದೆ.
ಮೊದಲ ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡಿಸ್ 48.5 ಓವರ್ ಗಳಲ್ಲಿ 269 ರನ್ ಗಳಿಸಿತು. ಶಮ್ರಾಹ್ ಬ್ರೂಕ್ಸ್ 93 ರನ್ ಗಳಿಸಿ ಔಟಾಗಿ ಚೊಚ್ಚಲ ಶತಕದಿಂದ ವಂಚಿತರಾದರು. ಬಳಿಕ ನಾಯಕ ಪೊಲಾರ್ಡ್ 69 ರನ್ ಗಳಿಸಿ ತಂಡವನ್ನು ಆಧರಿಸಿದರು. ಬೇರೆ ಯಾರಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಬರಲಿಲ್ಲ.
ಐರ್ಲೆಂಡ್ ಪರ ಮಾರ್ಕ್ ಅಡೈರ್ ಮತ್ತು ಕ್ರೇಗ್ ಯಂಗ್ ತಲಾ ಮೂರು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಐರ್ಲೆಂಡ್ 245 ರನ್ ಗೆ ಮುಗ್ಗರಿಸಿತು. ನಾಯಕ ಬಲ್ಬ್ರೈನ್ 71 ರನ್, ಹ್ಯಾರಿ ಟಕ್ಟರ್ 53 ರನ್ ಗಳಿಸಿದರೆ, ಆ್ಯಂಡಿ ಮೆಕ್ ಬ್ರೇನ್ 34 ರನ್ ಕಾಣಿಕೆ ನೀಡಿದರು. ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ಕೈಕೊಟ್ಟ ಕಾರಣ ಐರ್ಲೆಂಡ್ ಗುರಿ ಮುಟ್ಟಲಾಗದೆ ಸೋಲನುಭವಿಸಿತು.
ಇದನ್ನೂ ಓದಿ:ಸುಕೇಶ್ ಜೊತೆಗಿನ ಸ್ನೇಹ ಸಂಬಂಧದ ಬಗ್ಗೆ ಮೊದಲ ಬಾರಿ ಮೌನ ಮುರಿದ ಜಾಕ್ವೆಲಿನ್
ವಿಂಡೀಸ್ ಪರ ಅಲ್ಜಾರಿ ಜೋಸೆಫ್ ಮತ್ತು ರೊಮಾರಿಯೋ ಶೆಫರ್ಡ್ ತಲಾ ಮೂರು ವಿಕೆಟ್ ಕಿತ್ತರೆ, ಒಡೆನ್ ಸ್ಮಿತ್ ಎರಡು ವಿಕೆಟ್ ಪಡೆದರು.
ಶಮ್ರಾಹ್ ಬ್ರೂಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮಂಗಳವಾರ ಎರಡನೇ ಪಂದ್ಯ ನಡೆಯಲಿದೆ.