ಗದಗ: ಇತ್ತೀಚಿನ ವರ್ಷಗಳಲ್ಲಿ ಬಹುತೇಕರು ಕ್ರಿಕೆಟಿಗರಾಗುವಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ವರ್ಷಗಳ ಕಾಲ ತಪಸ್ಸಿನಂತೆ ಸಾಧನೆ ಮಾಡುತ್ತಾರೆ. ಆದರೆ, ಕ್ರಿಕೆಟ್‌ಗಿಂತ ತನಗೆ ಸೈಕ್ಲಿಂಗ್ ಲೇಸು ಎಂಬುದನ್ನರಿತ ಬಾಲಕಿಯೊಬ್ಬಳು ಸೈಕ್ಲಿಂಗ್ ಅಭ್ಯಾಸದಲ್ಲಿ ತೊಡಗಿದ ಒಂದೇ ವರ್ಷದಲ್ಲಿ ರಾಜ್ಯ-ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ವಿಜಯಪುರದ ಛಾಯಾ ನಾಗನಾಥ ನಾಗಶೆಟ್ಟಿ ಎಂಬ ಬಾಲಕಿ 17ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್‌ಚಾಂಪಿಯನ್ ಶಿಪ್‌ನಲ್ಲಿ 14 ವರ್ಷದೊಳಗಿನ ಟೈಮ್‌ಟ್ರಾಯಲ್ಸ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆಮೆರೆದಿದ್ದಾರೆ. ವಿಜಯಪುರದ ಬಿ.ವಿ.ದರ್ಬಾರ್ ಹೈಸ್ಕೂಲ್8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಛಾಯಾ, ಕಳೆದ ಐದು ವರ್ಷಗಳಿಂದ ಕ್ರಿಕೆಟ್ ಹಾಗೂ ಫಿಟ್‌ನೆಸ್‌ಗಾಗಿ ಅಥ್ಲೆಟಿಕ್ಸ್‌ನಲ್ಲಿ ತೊಡಗಿದ್ದಾರೆ.
ಛಾಯಾ 5ನೇ ತರಗತಿಯಲ್ಲಿದ್ದಾಗಲೇ ಸೈಕ್ಲಿಂಗ್ ವಿಭಾಗದಲ್ಲಿ ವಸತಿ ಶಾಲೆಗೆ ಪ್ರವೇಶ ಸಿಕ್ಕಿದ್ದರೂ ಕ್ರಿಕೆಟ್ ಮೇಲಿನ ಒಲವಿನಿಂದಕ್ರೀಡಾ ಶಾಲೆಗೆ ಸೇರಿರಲಿಲ್ಲ. ವರ್ಷಗಳಿಂದ ಕ್ರಿಕೆಟ್ ಅಭ್ಯಾಸ ಮಾಡಿದರೂ ನಿರೀಕ್ಷಿತ ಫಲ ಸಿಗದಿದ್ದರಿಂದ ತಂದೆ ನಾಗನಾಥ ಅವರು ಸೈಕ್ಲಿಂಗ್‌ಗೆ ಸೇರುವಂತೆ ಸಲಹೆ ನೀಡಿದ್ದರು. ಅದರಂತೆ ಕಳೆದ ವರ್ಷದಿಂದ ಸೈಕ್ಲಿಂಗ್ ಅಭ್ಯಾಸದಲ್ಲಿ ತೊಡಗಿದ್ದ ಛಾಯಾ, 7ನೇ ತರಗತಿಗೆ ಕ್ರೀಡಾಶಾಲೆಗೆ ಪ್ರವೇಶ ಪಡೆದಿದ್ದರು.
ಆದರೆ ಪ್ರಸಕ್ತ ಸಾಲಿನಲ್ಲಿ ಕೋವಿಡ್‌ನಿಂದ ಹೆಚ್ಚು ಅಭ್ಯಾಸ ಮಾಡಲಾಗದಿದ್ದರೂ, ಛಾಯಾ ಅವರ ಸೈಕ್ಲಿಂಗ್ ಪ್ರತಿಭೆಯಿಂದ ಕೆಲವೇ ತಿಂಗಳು ಕಾಲ ಅಭ್ಯಾಸ ನಡೆಸಿ ಮೊದಲ ಪ್ರಯತ್ನದಲ್ಲೇ ರಾಜ್ಯ-ರಾಷ್ಟ್ರ ಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾಳೆ. ಈ ಬಾರಿ 17ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಅಲ್ಲದೇ, ಛಾಯಾ ಅವರ ಅಂಕಗಳನ್ನಾಧರಿಸಿ ಅಂತಾರಾಷ್ಟ್ರೀಯ ಸ್ಪರ್ಧೆಗೂ ಆಯ್ಕೆಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ತರಬೇತುಗಾರ್ತಿ ಅಲ್ಕಾ ಪಡತರೆ
ನಾನು ಕ್ರಿಕೆಟ್‌ನಲ್ಲಿ ಎಷ್ಟೇ ಶ್ರಮ ವಹಿಸಿದರೂ ನಿರೀಕ್ಷಿತ ಫಲ ಸಿಗಲಿಲ್ಲ. ಆದರೆ, ನನ್ನೊಳಗಿನ ಸೈಕ್ಲಿಸ್ಟ್ ಇಲ್ಲಿಯ ವರೆಗೆ ಕರೆ ತಂದಿದೆ. ಮೊದಲಪ್ರಯತ್ನದಲ್ಲೇ ಕಂಚು ಬಂದಿದ್ದುಸಂತಸವಾಗುತ್ತಿದೆ. ಮುಂದೆ ಸೈಕ್ಲಿಂಗ್ ನಲ್ಲೇ ಹೆಚ್ಚಿನ ಶ್ರಮ ವಹಿಸಿ ಅಭ್ಯಾಸ ಮಾಡುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುಲು ಪ್ರಯತ್ನಿಸುತ್ತೇನೆ. –
ಛಾಯಾ ನಾಗಶೆಟ್ಟಿ,ಕಂಚಿನ ಪದಕ ಪಡೆದ ಸೈಕ್ಲಿಸ್ಟ್