Advertisement

ಬ್ರಾಡ್‌ಬ್ಯಾಂಡ್‌ ಸೇವೆ ಅಗ್ಗವಾಗಲಿವೆಯಾ?

02:45 AM Jun 23, 2020 | Hari Prasad |

ಹೊಸದಿಲ್ಲಿ: ಅಂತರ್ಜಾಲ ಕಂಪನಿಗಳು ಒದಗಿಸುವ ಬ್ರಾಡ್‌ಬ್ಯಾಂಡ್‌ ಅಂತರ್ಜಾಲ ಸೇವೆಯ ಪರವಾನಿಗೆ ಶುಲ್ಕವನ್ನು, ಅತ್ಯಂತ ಕಡಿಮೆ ಮಾಡುವ ಚಿಂತನೆಯೊಂದನ್ನು ಕೇಂದ್ರ ಸರಕಾರ ಮಾಡಿದೆ ಎನ್ನಲಾಗಿದೆ.

Advertisement

ಮೂಲಗಳ ಪ್ರಕಾರ, ಮನೆಯೊಂದಕ್ಕೆ ನೀಡುವ ಸಂಪರ್ಕದ ಪರವಾನಿಗೆ ಶುಲ್ಕವನ್ನು ವರ್ಷಕ್ಕೆ ಕೇವಲ 1 ರೂ.ಗೆ ಇಳಿಸುವ ಉದ್ದೇಶ ಹೊಂದಲಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಸಚಿವಾಲಯದ ಅಭಿಪ್ರಾಯ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಹೀಗೆ ಶುಲ್ಕ ಇಳಿಸಿದ್ದೇ ಆದರೆ, ಅದು ಜನಸಾಮಾನ್ಯರಿಗೆ ಅತ್ಯಂತ ಸಹಾಯಕವಾಗಲಿದೆ.

ಅಂತ‌ರ್ಜಾಲ ವೆಚ್ಚದಲ್ಲಿ ಬಹಳ ಇಳಿಕೆಯಾಗಲಿದೆ. ಇದರಿಂದ ಸರಕಾರಕ್ಕೆ ಮುಂದಿನ ಐದು ವರ್ಷಗಳಲ್ಲಿ 5927 ಕೋಟಿ ರೂ. ನಷ್ಟ ಸಂಭವಿಸಬಹುದು.

Advertisement

ಆದರೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ, ಹೆಚ್ಚಿನ ಜನರು ಅಂತರ್ಜಾಲ ಸಂಪರ್ಕ ಪಡೆಯುವುದಕ್ಕೆ ಮುಂದಾಗುತ್ತಾರೆ, ಆಗ ಈ ನಷ್ಟ ಭರ್ತಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಹೀಗೆ ಕಡಿಮೆ ಮಾಡಲು ಮುಂದಾಗಿರುವುದು ಕೇವಲ ಮನೆಬಳಕೆಗೆ ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next