Advertisement

British University ಭಾರತದಲ್ಲಿ: 8 ವ‌ರ್ಷದಲ್ಲಿ 30 ಕೋರ್ಸ್‌ 5,000 ಪದವೀಧರರ ಗುರಿ

01:38 AM Sep 02, 2024 | Team Udayavani |

ಹೊಸದಿಲ್ಲಿ: ದಿಲ್ಲಿಯಲ್ಲಿ ಕ್ಯಾಂಪಸ್‌ ತೆರೆಯಲು ಸಜ್ಜು­ಗೊಂಡಿರುವ ಬ್ರಿಟನ್‌ನ ಖ್ಯಾತ ಸೌತಾಂಪ್ಟನ್‌ ವಿ.ವಿ. ಯು ಮುಂದಿನ 8 ವರ್ಷದಲ್ಲಿ 30 ಕೋರ್ಸ್‌ಗಳನ್ನು ಪರಿಚಯಿಸುವುದರ ಜತೆಗೆ 5,000 ವಿದ್ಯಾ­ರ್ಥಿಗಳನ್ನು ಪದವೀಧರರನ್ನಾಗಿಸುವ ಗುರಿ ಹೊಂದಿ­ರು­ವುದಾಗಿ ಹೇಳಿದೆ. ಅಲ್ಲದೇ ಮುಂದಿನ ವರ್ಷ­ದಿಂದಲೇ ಕ್ಯಾಂಪಸ್‌ ಕಾರ್ಯಾಚರಣೆ ಆರಂಭಿಸುವು­­­­ದಾಗಿ ತಿಳಿಸಿದೆ.

Advertisement

ಈ ಕುರಿತಂತೆ ವಿವಿಯ ಅಂತಾರಾ­ಷ್ಟ್ರೀಯ ಯೋಜನೆ ಗಳ ಅಧ್ಯಕ್ಷರಾದ ಪ್ರೊ| ಆ್ಯಂಡ್ರೂé ಅಥರ್ಟನ್‌ ಮಾಹಿತಿ ನೀಡಿದ್ದಾರೆ. ಮೊದಲ 8 ರಿಂದ 10 ವರ್ಷದ ಅವಧಿಯಲ್ಲಿ 5,500 ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಗುರಿ ಹೊಂದಿದ್ದೇವೆ. ಬ್ರಿಟನ್‌ನಲ್ಲಿ­ರುವ ವಿವಿಯಲ್ಲಿ ವಿಧಿಸಲಾಗಿರುವ ಶೈಕ್ಷಣಿಕ ಶುಲ್ಕದಲ್ಲಿ ಶೇ.60ರಷ್ಟು ಶುಲ್ಕವನ್ನು ಮಾತ್ರ ಇಲ್ಲಿನ ವಿದ್ಯಾರ್ಥಿ­ಗಳಿಗೆ ವಿಧಿಸಲಾಗುತ್ತದೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next