Advertisement

laughing gas; ಬ್ರಿಟನ್‌ನ ವಿದ್ಯಾರ್ಥಿನಿಯ ಸಾವಿಗೆ ‘ನಗುವ ಅನಿಲ’ ಕಾರಣ!

01:56 AM Apr 12, 2024 | Team Udayavani |

ಲಂಡನ್‌: ಬ್ರಿಟನ್‌ನ ಬರ್ಕ್‌ಶೈರ್‌ನಲ್ಲಿ ಕಳೆದ ವರ್ಷ 24 ವರ್ಷದ ವಿದ್ಯಾರ್ಥಿನಿಯ ನಿಗೂಢ ಸಾವಿಗೆ ಕಾರಣವೇನು ಎಂಬುದು ಈಗ ಬೆಳಕಿಗೆ ಬಂದಿದೆ. “ನಗುವ ಅನಿಲ’ ಎಂದೇ ಖ್ಯಾತವಾಗಿರುವ ನೈಟ್ರಸ್‌ ಆಕ್ಸೆ„ಡ್‌ ಅನ್ನು ಪ್ರತಿ ದಿನ 2ರಿಂದ 3 ಬಾಟಲಿ ಸೇವಿಸಿ ಆಕೆ ಮೃತಪಟ್ಟಿದ್ದಳು! ಎಲ್ಲೆನ್‌ ಮರ್ಸರ್‌(24) ಮೃತ ವಿದ್ಯಾರ್ಥಿನಿ. ಅನಾರೋಗ್ಯದ ಕಾರಣ ಮರ್ಸರ್‌ ಕಳೆದ ವರ್ಷ ಫೆ.8ರಂದು ವೆಕ್ಸಾéಮ್‌ ಪಾರ್ಕ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫ‌ಲಕಾರಿ ಯಾಗದೇ ಮಾರನೇ ದಿನವೇ ಅಸುನೀಗಿದರು. ವಿಚಾರಣೆ ಅನಂತರ ಈಗ ಸಾವಿಗೆ ಕಾರಣ ಎಂಬ ಬಹಿರಂಗವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next