Advertisement

ಬ್ರಿಟನ್‌ನಲ್ಲಿ ತೈಲ ಬಿಕ್ಕಟ್ಟು; ಸರಕಾರಕ್ಕೆ ಇಕ್ಕಟ್ಟು

12:02 AM Sep 28, 2021 | Team Udayavani |

ಲಂಡನ್‌: ಬ್ರಿಟನ್‌ನ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲವು ಕಡೆ ನಾಲ್ಕೈದು ತಾಸುಗಳ ಕಾಲ ಮೈಲುಗಟ್ಟಲೆ ಸರದಿಯಲ್ಲಿ ಕಾಯಬೇಕಾದ ಸ್ಥಿತಿ. ಕಾರುಗಳಿಗೆ ಇಂಧನವಿಲ್ಲದೆ ಬಹುತೇಕ ಮಂದಿ ವರ್ಕ್‌ ಫ್ರಂ ಹೋಂ ಮೊರೆಹೋಗಿದ್ದಾರೆ. ಶಾಲೆಗಳೂ ಮತ್ತೆ ಆನ್‌ಲೈನ್‌ ತರಗತಿಯತ್ತ ಮುಖ ಮಾಡಿವೆ!

Advertisement

ಇದಕ್ಕೆಲ್ಲ ಕಾರಣ “ಪೆಟ್ರೋಲ್‌ ಬಿಕ್ಕಟ್ಟು’!

ಬ್ರಿಟನ್‌ ಹಿಂದೆಂದೂ ಕಂಡರಿಯದ ತೈಲ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟಿಗೆ ಕಾರಣ ಟ್ರಕ್‌ ಚಾಲಕರ ಕೊರತೆ. ತೈಲವನ್ನು ಪೆಟ್ರೋಲ್‌ ಪಂಪ್‌ಗಳಿಗೆ ಕೊಂಡೊಯ್ಯಲು ಟ್ರಕ್‌ ಚಾಲಕರೇ ಸಿಗುತ್ತಿಲ್ಲ. ಈ ಸುದ್ದಿ ಹೊರಬೀಳುತ್ತಲೇ ಜನರು ಗಾಬರಿಗೊಳಗಾಗಿ ಪಂಪ್‌ಗಳಿಗೆ ಮುತ್ತಿಗೆ ಹಾಕತೊಡಗಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರವು ಯೋಧರನ್ನು ಚಾಲಕರನ್ನಾಗಿ ನಿಯೋಜಿಸಲು ಮುಂದಾಗಿದೆ.

ಬಿಕ್ಕಟ್ಟಿಗೇನು ಕಾರಣ?
ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬಂದ ಬಳಿಕ 13 ಲಕ್ಷಕ್ಕೂ ಅಧಿಕ ವಿದೇಶಿ ಕಾರ್ಮಿಕರು ದೇಶ ತೊರೆದಿದ್ದಾರೆ. 2019ರ 2ನೇ ತ್ತೈಮಾಸಿಕದಿಂದ 2021ರ 2ನೇ ತ್ತೈಮಾಸಿಕದಅವಧಿಯಲ್ಲಿ ಬ್ರಿಟನ್‌ 72 ಸಾವಿರ ಟ್ರಕ್‌ ಚಾಲಕರನ್ನು ಕಳೆದುಕೊಂಡಿದೆ. ಅಲ್ಲದೆ ಕೊರೊನಾದಿಂದಾಗಿ ಹಲವರು ಕೆಲಸಕ್ಕೆ ಮರಳುತ್ತಿಲ್ಲ. ಪರವಾನಿಗೆ ವಿತರಣೆಯೂ ನನೆಗುದಿಗೆ ಬಿದ್ದಿದೆ.

ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

Advertisement

ಸರಕಾರ ಕೈಗೊಂಡಿರುವ ಕ್ರಮಗಳೇನು?

-ವಿದೇಶಿ ಟ್ರಕ್‌ ಚಾಲಕರನ್ನು ಕರೆತರಲು ಸಾವಿರಾರು ತುರ್ತು ವೀಸಾ ವಿತರಣೆಗೆ ನಿರ್ಧಾರ.

-ಟ್ರಕ್‌ ಚಾಲಕರಿಗೆ 5 ಸಾವಿರ ವೀಸಾ, ಪೌಲಿó ಕಾರ್ಮಿಕರಿಗೆ 5,500 ವೀಸಾ ವಿತರಿಸುವ ಗುರಿ

-ಕಾಂಪಿಟೀಶನ್‌ ಆ್ಯಕ್ಟ್ 1998 ವ್ಯಾಪ್ತಿಯಿಂದ ತೈಲೋದ್ಯಮಕ್ಕೆ ವಿನಾಯಿತಿ ನೀಡಲು ಚಿಂತನೆ

-ಘನ ವಾಹನ ಚಾಲನೆ ಪರವಾನಿಗೆ ಇರುವವರಿಗೆ ಪತ್ರ ಬರೆದು ಕೆಲಸಕ್ಕೆ ಮರಳುವಂತೆ ವಿನಂತಿ

-ನಾಲ್ಕು ಸಾವಿರ ಮಂದಿಗೆ ಘನ ವಾಹನ ಚಾಲನೆ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next