Advertisement

ಬ್ರಿಟನ್‌ ರಾಣಿ ಸ್ಥಳಾಂತರ ಸಾಧ್ಯತೆ!

12:30 AM Feb 04, 2019 | Team Udayavani |

ಲಂಡನ್‌: ಮುಂದಿನ ತಿಂಗಳು ಬ್ರೆಕ್ಸಿಟ್‌ ಬಳಿಕ ಯುಕೆಯಲ್ಲೇನಾದರೂ ಗಲಭೆ ಶುರುವಾದರೆ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಹಾಗೂ ರಾಜಮನೆತನದ ಇತರೆ ಹಿರಿಯ ಸದಸ್ಯರನ್ನು ರಹಸ್ಯವಾಗಿ ಬೇರೆಡೆಗೆ ಸ್ಥಳಾಂತರಿಸಲು ಯೋಜಿಸಲಾಗಿದ್ದು, ಅದಕ್ಕೆಂದೇ ಸಿದ್ಧತೆ ಶುರುವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Advertisement

ಅಂದುಕೊಂಡಂತೆ ನಡೆದರೆ, ಮಾ.29ರಂದು ಐರೋಪ್ಯ ಒಕ್ಕೂಟದಿಂದ ಯುಕೆ ಹೊರಬರಲಿದ್ದು, ಈ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ಒಂದು ವೇಳೆ, ಬ್ರೆಕ್ಸಿಟ್‌ ಪ್ರಕ್ರಿಯೆಯ ಸಮಯದಲ್ಲಿ ಗಲಭೆ ಸೃಷ್ಟಿಯಾಗಿ ಪ್ರಕ್ಷುಬ್ಧತೆ ಕಂಡುಬಂದರೆ, ಕೂಡಲೇ ರಾಣಿ ಮತ್ತು ರಾಜಮನೆತನ ದವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲು ತುರ್ತು ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಸೋವಿಯತ್‌ ಒಕ್ಕೂಟದಿಂದ ಅಣ್ವಸ್ತ್ರ ದಾಳಿ ನಡೆದರೆ, ರಾಜಮನೆತನವನ್ನು ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಮೊದಲೇ ಕಾರ್ಯಯೋಜನೆ ರೂಪಿಸಲಾಗಿತ್ತು. ಅದೇ ಮಾದರಿಯನ್ನು ಬ್ರೆಕ್ಸಿಟ್‌ ವೇಳೆಯೂ ಬಳಸಿಕೊಳ್ಳಲು ಯೋಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next