Advertisement
ಯುನೈಟೆಡ್ ಕಿಂಗ್‌ಡಮ್‌ನ ಇತಿಹಾಸದಲ್ಲೇ ಹೀಗಾಗುತ್ತಿರುವುದು ಇದೇ ಮೊದಲು.
Related Articles
ಆರೋಗ್ಯ ಇಲಾಖೆ, ಲೆವೆಲ್-4 ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಸಾಧ್ಯವಾದಷ್ಟೂ ಎರಡು ದಿನ ಮನೆಯಲ್ಲೇ ಇರಬೇಕು ಎಂದು ಸೂಚಿಸಲಾಗಿದೆ. ಮೆಟ್ರೋ ರೈಲುಗಳ ವೇಗಕ್ಕೆ ಕಡಿವಾಣ ಹಾಕಲಾಗಿದೆ.
Advertisement
ಭಾರತದಲ್ಲಿ 40 ಡಿಗ್ರಿ ಆಜುಬಾಜಿಗೆ ಉಷ್ಣಾಂಶ ಬಂದರೆ ಅಷ್ಟೇನೂ ದೊಡ್ಡದು ಎನ್ನಿಸಲ್ಲ. ಏಕೆಂದರೆ, ರಾಜಸ್ಥಾನದ ಫಲೋಡಿ ಎಂಬಲ್ಲಿ 2016ರಲ್ಲಿ 51 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬೇಸಿಗೆಯಲ್ಲಿ ನಮ್ಮಲ್ಲಿ 35ರಿಂದ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುವುದು ಸಾಮಾನ್ಯ ಸಂಗತಿ. ಆದರೆ, ಯುನೈಟೆಡ್ ಕಿಂಗ್‌ಡಮ್‌ನಲ್ಲಿನ ಪರಿಸ್ಥಿತಿ ಹಾಗಲ್ಲ.
ಸದಾ ತಂಪು ವಾತಾವರಣ. ರಾತ್ರಿಯ ವೇಳೆ ಇಬ್ಬನಿ ಅಥವಾ ಮಂಜು ಸುರಿಯುವಿಕೆ ಅಲ್ಲಿ ಮಾಮೂಲು. ಹಾಗಾಗಿ, 40 ಡಿಗ್ರಿ ಸೆಲ್ಸಿಯಸ್ ಉಷ್ಣ ಎಂದ ಕೂಡಲೇ ಇಷ್ಟು ಕಟ್ಟುನಿಟ್ಟಿನ ಸೂಚನೆಗಳು ರವಾನೆಯಾಗಿವೆ.