Advertisement

ಪ್ಲಿಸ್ಕೋವಾಗೆ ಬ್ರಿಸ್ಬೇನ್‌ ಟೆನಿಸ್‌ ಪ್ರಶಸ್ತಿ

01:25 AM Jan 07, 2019 | Team Udayavani |

ಬ್ರಿಸ್ಬೇನ್‌: ಭಾರೀ ಪೈಪೋಟಿ ನೀಡಿದ ಉಕ್ರೇನಿನ ಲೆಸಿಯಾ ಸುರೆಂಕೊ ಅವರಿಗೆ 4-6, 7-5, 6-2 ಅಂತರದಿಂದ ಸೋಲುಣಿಸುವ ಮೂಲಕ ಕ್ಯಾರೋಲಿನಾ ಪ್ಲಿಸ್ಕೋವಾ “ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌ ಟೆನಿಸ್‌’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

ಮೊದಲ ಸೆಟ್‌ ಗೆದ್ದ ಸುರೆಂಕೊ, ದ್ವಿತೀಯ ಸೆಟ್‌ ವೇಳೆ 5-4ರ ಮುನ್ನಡೆ ಸಾಧಿಸಿದ್ದರು. ಈ ಸಂದರ್ಭದಲ್ಲಿ ಸರ್ವ್‌ ಕೂಡ ಅವರದೇ ಆಗಿತ್ತು. ಆದರೆ ದಿಢೀರನೇ ತಿರುಗಿ ಬಿದ್ದ ಪ್ಲಿಸ್ಕೋವಾ 7-5ರಿಂದ ದ್ವಿತೀಯ ಸೆಟ್‌ ವಶಪಡಿಸಿಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ಸುರೆಂಕೊ ಆಟ ಸಾಗಲಿಲ್ಲ.

ಮೊದಲ ಸೆಟ್‌ ಕೇವಲ 38 ನಿಮಿಷಗಳಲ್ಲಿ ಸುರೆಂಕೊ ಪಾಲಾಯಿತು. 10 ವಿನ್ನರ್ ಹಾಗೂ ಮೊದಲ ಸರ್ವ್‌ನ ಶೇ. 81ರಷ್ಟು ಯಶಸ್ಸು ಉಕ್ರೇನಿಯನ್‌ ಆಟಗಾರ್ತಿಯ ಹೆಚ್ಚುಗಾರಿಕೆಯಾಗಿತ್ತು. ದ್ವಿತೀಯ ಸೆಟ್‌ನಲ್ಲಿ 5-4ರ ಮುನ್ನಡೆಯಲ್ಲಿದ್ದಾಗ ತಿರುಗಿ ಬಿದ್ದ ಪ್ಲಿಸ್ಕೋವಾ ಮುಂದಿನ 14 ಅಂಕಗಳಲ್ಲಿ 13ನ್ನು ವಶಪಡಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಪಂದ್ಯ ಒಟ್ಟು 2 ಗಂಟೆ, 12 ನಿಮಿಷಗಳ ಕಾಲ ಸಾಗಿತು. ಇದು ಪ್ಲಿಸ್ಕೋವಾ ಪಾಲಾದ 8ನೇ ಟೆನಿಸ್‌ ಪ್ರಶಸ್ತಿ.

Advertisement

Udayavani is now on Telegram. Click here to join our channel and stay updated with the latest news.

Next