Advertisement

ಮಸೀದಿಗಳಲ್ಲಿ ಶಾಂತಿ, ಏಕತೆ ನಿಯಮ ಪಾಲಿಸಿ: ಅಬ್ದುಲ್‌ ಅಜೀಮ್‌

04:56 PM Aug 13, 2021 | Team Udayavani |

ಮಂಡ್ಯ: ಮಸೀದಿಗಳಲ್ಲಿ ಶಾಂತಿ, ಸೌಹಾರ್ದ, ಸಮನ್ವಯತೆ ಮತ್ತು ಏಕತೆಯ ನಿಯಮಗಳನ್ನು ಪಾಲಿಸಿ, ನಿಮ್ಮ ವಾಸಸ್ಥಾನದ ಹಾಗೂ ಮಸೀದಿಯ ಸುತ್ತಮುತ್ತಲಿನ ವಾತಾವರಣದ ಸ್ವಚ್ಛತೆ ಕಾಪಾಡಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್‌ ತಿಳಿಸಿದರು. ತಿಳಿಸಿದರು.

Advertisement

ನಗರದ ಗುತ್ತಲು ಕಾಲೋನಿಯ ಸಫ್ದರ್‌ ಮಸೀದ್‌ಗೆ ಭೇಟಿ ನೀಡಿ, ಪರಿವೀಕ್ಷಣೆ ಮಾಡಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ರಕ್ಷಣೆ
ಮತ್ತು ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.

ಅಲ್ಪಸಂಖ್ಯಾತರ ಸಮುದಾಯವು ಶಾಂತತೆ ಕಾಪಾಡಿ, ಸೌಹಾರ್ದತೆಯಿಂದ ಬಾಳಿ, ಇತರ ಧರ್ಮದ ಜನರೊಂದಿಗೆ ಏಕತೆ ಕಾಪಾಡಿ ಮತ್ತು
ಸಮಸ್ಯೆಗಳು ಕಂಡು ಬಂದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಹೇಳಿದರು.

ಮನೆಗೊಂದು ಮರ ಬೆಳೆಸಿ: ಜನರಿಂದ ರಸ್ತೆಗಳು ಕೊಳಗೇರಿ, ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದರು. ಮಸೀದಿಯ ಸ್ವಚ್ಛತೆ , ಶಾಂತತೆ ಕಾಪಾಡಿಕೊಳ್ಳಿ, ಪ್ರತಿಯೊಂದು ಮನೆ ಮುಂದೆ ಒಂದು ಮರ ಬೆಳೆಸಬೇಕು. ಜೀವಕ್ಕೆ ಆಮ್ಲಜನಕ ತುಂಬಾ ಅವಶ್ಯವಾಗಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಎಂದರು.

ಏಕತೆಯ ನಿಯಮ ಪಾಲಿಸಿ: ಮನೆಗಳಿಗೆ ಕುಡಿಯುವ ನೀರಿನ ಸರಬರಾಜಿನ ಪೈಪ್‌ ಗಳನ್ನು ಡ್ರೈನೇಜ್ ಮೇಲೆ ತೆಗೆದುಕೊಳ್ಳಲಾಗಿದೆಯೋ
ಅಥವಾ ಸಿವೇಜ್‌ ಮೂಲಕ ತೆಗೆದುಕೊಳ್ಳಲಾಗಿದೆಯೋ ಎಂಬುದನ್ನು ಪರೀಕ್ಷಿಸಿ, ಕುಡಿಯುವ ನೀರಿನ ಶುದ್ಧತೆ ಕಾಪಾಡಿಕೊಳ್ಳಬೇಕು. ನಂತರ ನಗರದ ಸೈಂಟ್‌ ಜೋಸೆಫ್‌ ಚರ್ಚ್‌ ಹಾಗೂ ಜೈನ ಮಂದಿರಕ್ಕೆ ಭೇಟಿ ನೀಡಿ, ಚರ್ಚ್‌ ಮುಖ್ಯಸ್ಥರು , ಜೈನ ಸಮುದಾಯದ ಮುಖಂಡರೊಂದಿಗೆ ಸಮುದಾಯದ ಕುರಿತು ಮಾತುಕತೆ ನಡೆಸಿದರು.

Advertisement

ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಮಹಮ್ಮದ್‌ ನಜೀರ್‌, ತಹಶೀಲ್ದಾರ್‌ ಚಂದ್ರಶೇಖರ ಶಂ.ಗಾಳಿ, ಅರಣ್ಯಾಧಿಕಾರಿ ಶಿಲ್ಪಾ,
ವಾರ್ತಾಧಿಕಾರಿ ಟಿ.ಕೆ.ಹರೀಶ್‌, ಅಲ್ಪಸಂಖ್ಯಾತರ ಅಭಿವೃದ್ಧಿ ಅಧಿಕಾರಿಗಳು, ಅಲ್ಪಸಂಖ್ಯಾತರ ಆಯೋಗದ ನಿರ್ದೇಶಕರು, ಮುನ್ಸಿಪಲ್‌ ಕಮಿಷನರ್‌, ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಕುಂದುಕೊರತೆಗಳಿಗೆ ಶೀಘ್ರವೇ ಪರಿಹಾರ
ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಸಮುದಾಯದ ಸಮಸ್ಯೆಗಳನ್ನು ಆಲಿಸಲಾಗಿದ್ದು, ಶೀಘ್ರವೇ ಕುಂದು-ಕೊರತೆಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್‌ ತಿಳಿಸಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರೊಂದಿಗೆ ಕುಂದು-ಕೊರತೆಗಳ
ಸಭೆ ನಡೆಸಿ ಮಾತನಾಡಿ, ಸರ್ಕಾರದ ಸವಲತ್ತುಗಳಿಂದ ಅಲ್ಪಸಂಖ್ಯಾತ ಸಮುದಾಯವು ಕಡೆಗಣಿಸದಂತೆ ಮತ್ತು ದೊರೆಯಬಹುದಾದ ಸೌಲಭ್ಯಗಳು ಶೀಘ್ರವೇ ಫಲಾನುಭವಿಗಳಿಗೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿನ ನಿವೇಶನದ ಹಕ್ಕು ಪತ್ರಗಳು, ಒಳಚರಂಡಿ, ರಸ್ತೆ ಗುಂಡಿಗಳು, ವಿದ್ಯುತ್‌, ಕುಡಿಯುವ ನೀರು,
ರುದ್ರಭೂಮಿ,ವಸತಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ದೂರು ಬಂದಿದ್ದು,ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಬೀಡಿ ಕಾಲೋನಿಯಲ್ಲಿ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿದ್ದು, ಗಮನಹರಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಚಂದ್ರಶೇಖರ ಶಂ.ಗಾಳಿ ಅವರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next