Advertisement
ದೀಪಾವಳಿ ಎಂದರೆ ಬೆಳಕಿನ ಹಬ್ಬ. ನೆರೆ ಸಂತ್ರಸ್ತರಿಗೆ ನೆರವಾಗುವ ಹಾಗೂ ಕುಂಬಾರರ ಬದುಕಿಗೆ ಬೆಳಕಾಗುವಂತಹ ಮಾನವೀಯ, ಮಣ್ಣಿನ ಹಣತೆ ಬಳಕೆಯ ಮೂಲಕ ದೀಪಾವಳಿ ಆಚರಣೆ ಮಾಡಬಹುದಾಗಿದೆ. ಪಟಾಕಿ ಸುಡುವುದನ್ನು ನಿಯಂತ್ರಿಸ ಬಹುದಾಗಿದೆ.
Related Articles
Advertisement
ಆಡಂಬರ ಬದಿಗಿಟ್ಟು; ಅವರ ಬದುಕು ಕಟ್ಟಲು ಕೈಜೋಡಿಸಿ: ಉತ್ತರ ಕರ್ನಾಟಕ ಮೂಲದ ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂದು ತನ್ನೂರಿನವರು ನೆರೆಯಿಂದ ಎಲ್ಲವನ್ನು ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ದೀಪಾವಳಿ ಹಬ್ಬಕ್ಕಿಂತ ದಿನದ ಬದುಕಿನ ಚಿಂತೆಯಿದೆ. ಹೀಗಾಗಿ ರಾಜಧಾನಿಯಲ್ಲಿ ಒಂದಿಷ್ಟು ಆಡಂಬರ ಕಡಿಮೆ ಮಾಡಿ, ನೆರೆ ಸಂತ್ರಸ್ತರ ನೆರವಿಗೆ ಬರಬೇಕಿದೆ. ನೆರೆ ಸಂತ್ರಸ್ತರ ಬಹುಮುಖ್ಯ ಸಮಸ್ಯೆ ಎಂದರೆ ವಸ್ತ್ರ, ಒಳವಸ್ತ್ರಗಳ ಕೊರತೆ. ಅವುಗಳು ಬೇಕೆಂದು ಕೇಳಲು ಪುರುಷರು, ಹೆಚ್ಚಾಗಿ ಮಹಿಳೆಯರು ಮುಜುಗರಪಡುತ್ತಿದ್ದಾರೆ. ಆದರೆ, ಈ ಸಮಸ್ಯೆ ಮನಗಂಡ ಸಂಘ ಸಂಸ್ಥೆಗಳು ಹೊಸ ಒಳವಸ್ತ್ರಗಳನ್ನು ಖರೀದಿಸಿ ಸಂತ್ರಸ್ತರಿಗೆ ನೀಡಬಹುದು. ರಾಜಾಜಿನಗರ ಬಾಷ್ಯಂ ವೃತ್ತದ ಬಳಿಯ ಉತ್ತರ ಕರ್ನಾಟಕದ ಸಂಘ-ಸಂಸ್ಥೆಗಳ ಮಹಾ ಸಂಸ್ಥೆಯು ಪರಿಹಾರ ಸಾಮಗ್ರಿ ಸಂಗ್ರಹಿಸುತ್ತಿದ್ದು, ಇವರ ಜತೆ ಕೈಜೋಡಿಸಬಹುದು.
ನಿಮ್ಹಾನ್ಸ್ ದೀಪಾವಳಿ ವಿಶೇಷ ಕಿಟ್ :
ನಿಮ್ಹಾನ್ಸ್‌ನ ಮಾನಸಿಕ ರೋಗಿಗಳ ಪುನರ್ವಸತಿ ಕೇಂದ್ರದ ರೋಗಿಗಳು ಈ ಬಾರಿ ದೀಪಾವಳಿ ಗೆಂದು ವಿಶೇಷ ಉಡುಗೊರೆ ಕಿಟ್ ಸಿದ್ಧಪಡಿಸಿ ದ್ದಾರೆ. ಇದರಲ್ಲಿ ಎರಡು ಆಕರ್ಷಕ ದೀಪಗಳು, ಎರಡು ವಿಶೇಷ ರಂಗೋಲಿ ವಿನ್ಯಾಸದ ಮಣೆ ಗಳು, ನಾಲ್ಕು ಬಣ್ಣದ ರಂಗೋಲಿ ಪುಡಿಗಳ ಪೊಟ್ಟಣಗಳಿವೆ. ಇವುಗಳನ್ನು ನಿಮ್ಹಾನ್ಸ್ ಆವರಣದ ನಂದಿನಿ ವಿಲ್ಕ್ಬೂ ತ್ ಪಕ್ಕದ ಒಪಿಸಿ ಸೇಲ್ಸ್ ಕೌಂಟರ್ನಲ್ಲಿಮಾರಾಟಕ್ಕಿಡಲಾಗಿದೆ. ಕಿಟ್ ಒಂದಕ್ಕೆ 300 ರೂ. ನಿಗದಿ ಪಡೆಸಿದ್ದು, ಮಾರಾಟ ದಿಂದ ಬರುವ ಸಂಪೂರ್ಣ ಹಣವನ್ನು ನಿಮ್ಹಾನ್ಸ್ ಮಾನಸಿಕ ಅಸ್ವಸ್ಥರ ಕಲ್ಯಾಣಕ್ಕೆ ಬಳಸಿಕೊಳ್ಳಲಿದೆ. ಮಾಹಿತಿಗೆ 080 26995336 ಸಂಪರ್ಕಿಸಬಹುದು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಬೆಂಗಳೂರು ನಿವಾಸಿಗಳ ನೆರವು ಅಗತ್ಯವಿದೆ. ಈ ಬಾರಿ ಹಬ್ಬದ ಖರ್ಚು ಕಡಿಮೆ ಮಾಡಿ ಆ ಹಣದಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗಬಹುದು. ಆಹಾರ ಪದಾರ್ಥ ಹೊರತುಪಡೆಸಿ ಹೊಸ ಬಟ್ಟೆಗಳು, ದಿನನಿತ್ಯ ಸಾಮಗ್ರಿಗಳನ್ನು ನೀಡಿದರೆ ತಲುಪಿಸುವ ಕೆಲಸ ಮಾಡುತ್ತೇವೆ.
●ಶಿವಕುಮಾರ ಮೇಟಿ, ಅಧ್ಯಕ್ಷರು,ಉತ್ತರ ಕರ್ನಾಟಕದ ಸಂಘ-ಸಂಸ್ಥೆಗಳು -ಜಯಪ್ರಕಾಶ್ ಬಿರಾದಾರ್