ಮೊಬೈಲುಗಳಿಲ್ಲದ ಕಾಲದಲ್ಲಿ, ಮಕ್ಕಳು ದೊಡ್ಡವರೆನ್ನದೆ ಎಲ್ಲರ ಪಾಕೆಟ್‌ಗಳಲ್ಲಿ ಇರುತ್ತಿದ್ದ ವಿಡಿಯೊ ಗೇಮ್ ಸಾಧನ ಇದು. ಬಹಳ ಹಿಂದೆ ಟಿ.ವಿ. ವಿಡಿಯೊ ಗೇಮುಗಳ ಉಪಕರಣವನ್ನು ಟಿ.ವಿಗೆ ಜಾಯ್ ಸ್ಟಿಕ್ ಸಹಾಯ ಆಡಬಹುದಾಗಿತ್ತು. ಪೋರ್ಟೆಬಲ್ ವಿಡಿಯೊ ಗೇಮುಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಆ ಸಮಯದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ “ಬ್ರಿಕ್ ವಿಡಿಯೊ ಗೇಮ…’ ಬಿರುಗಾಳಿಯೆಬ್ಬಿಸಿತು.
ಫ್ಯಾನ್ಸಿ ಸ್ಟೋರು, ಜಾತ್ರೆ, ಸಂತೆ … ಹೀಗೆ ಎಲ್ಲೆಂದರಲ್ಲಿ, ಬ್ರಿಕ್ ವಿಡಿಯೊ ಗೇಮ್‌ಗಳು ಕಾಣಿಸಿಕೊಂಡವು. ಮಕ್ಕಳು ಮೇಲೆ ಬಿದ್ದು ಇವುಗಳನ್ನು ಖರೀದಿಸತೊಡಗಿದರು. ಚಿಕ್ಕ
ಪರದೆಯ ಮೇಲೆ ನಾನಾ ಗಾತ್ರದ ಇಟ್ಟಿಗೆಗಳು ಮೂಡುತ್ತಿದವು. ಇದ್ದ ಮೂರು ನಾಲ್ಕು ಬಗೆಯ ಆಟಗಳೂ ಇಟ್ಟಿಗೆಗಳಿಂದಲೇವು. ಹೀಗಾಗಿಯೇ ಇವುಗಳಿಗೆ ಗೇಮ…’ ಎಂದು ಹೆಸರು.
ವಿಡಿಯೊ ಗೇಮ್ ಪರದೆಯನ್ನು, “ಡಾಟ್ ಮ್ಯಾಟ್ರಿಕ್ಸ್’ ಪರದೆ ಎಂದುಕರೆಯುತ್ತಾರೆ. ಇದು, ಎರಡು ಪುಟ್ಟಾ ಬ್ಯಾಟರಿಗಳ ಸಹಾಯದಿಂದ ಸಂಚರಿಸುತ್ತಿತ್ತು. ಆಟದ ನಾಲ್ಕೈದು ಬಟನ್‌ಗಳ ಸಹಾಯದಿಂದ ಪರದೆ ಮೇಲೆ ಮೂಡುತ್ತಿದ್ದ ಬ್ರಿಕ್ ಗಳ ಚಲನೆಯನ್ನು ನಿಯಂತ್ರಿಸಬಹುದಾಗಿತ್ತು. ಇದು ಸಿಂಗಲ್ ಕಲರ್ ವಿಡಿಯೊ ಗೇಮ್ ಎಂಬುದು ಗಮನಾರ್ಹ. ಕಪ್ಪು ಬಣ್ಣ ಬಿಟ್ಟರೆ ಬೇರಾವ ಬಣ್ಣಗಳೂ ಪರದೆ ಮೇಲೆ ಮೂಡುತ್ತಿರಲಿಲ್ಲ.