Advertisement

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

01:47 AM Jun 30, 2024 | Team Udayavani |

ಸುಳ್ಯ: ತಂದೆ ನಿಧನ ಹೊಂದಿದರೂ ವಿದೇಶದಿಂದ ಊರಿಗೆ ಬರಲು ತನ್ನ ಸಂಸ್ಥೆ ಅನು ಮತಿ ನೀಡದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಯುವ ಕನಿಗೆ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಸಹಾಯ ಹಸ್ತ ಚಾಚಿದ್ದಾರೆ.

Advertisement

ಸುಳ್ಯ ತಾಲೂಕಿನ ಮಡಪ್ಪಾಡಿಯ ತ್ರಿಶೂಲ್‌ ಮಾಲ್ಡೀವ್ಸ್‌ನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿ ದ್ದಾರೆ. ಇವರ ತಂದೆ ಗುರುಪ್ರಸಾದ್‌ ಗೋಳ್ಯಡಿ ಜೂ. 20ರಂದುನಿಧನ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಕಂಪೆನಿಯಲ್ಲಿ ರಜೆ ಕೋರಿ ದರೂ ಕಂಪೆನಿ ನಿರಾಕರಿಸಿತು. ಪಾಸ್‌ ಪೋರ್ಟ್‌ನ್ನೂವಶಪಡಿಸಿಕೊಂಡಿತು.

ಇತ್ತ ಏಕೈಕ ಮಗ ಬರುತ್ತಾನೆಂದು ಕುಟುಂಬಸ್ಥರು ಜೂ.24ರ ವರೆಗೂ ಮೃತ ದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಇರಿಸಿ ಕಾದರು. ಕೊನೆಗೆ ತನಗೆ ಬರಲಾಗುವುದಿಲ್ಲ ಎಂಬ ಸಂದೇಶ ಮಗನಿಂದ ಬಂದ ಮೇಲೆ ಆನಿವಾರ್ಯವಾಗಿ ಕುಟುಂಬಸ್ಥರು ಅಂತ್ಯ ಕ್ರಿಯೆ ನೆರವೇರಿಸಿದರು.

ಜೂ. 24ರಂದು ಸಂಸದ ಬ್ರಿಜೇಶ್‌ ಚೌಟ ಪ್ರಮಾಣ ವಚನಕ್ಕಾಗಿ ದಿಲ್ಲಿಗೆ ತೆರಳಿ ದ್ದಾಗ ಗುರುಪ್ರಸಾದ್‌ ಅವರ ಹತ್ತಿ ರದ ಸಂಬಂಧಿ, ಬೆಳ್ತಂಗಡಿಯ ನಿವೃತ್ತ ಉಪನ್ಯಾಸಕ ರುಕ್ಮಯ್ಯ ಗೌಡರು ಸಂಸದರಿಗೆ ದೂರ ವಾಣಿ ಮೂಲಕ ಸಹಾಯ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಸಂಸದರು, ವಿದೇಶಾಂಗ ಇಲಾಖೆ ಮತ್ತು ಮಾಲ್ಡೀವ್ಸ್‌ ಹೈಕಮಿಷನ್‌ಗೆ ಇಮೇಲ್‌ ಮೂಲಕ ಮನವಿ ಮಾಡಿದರು. ಸಂಸದರ ಮನವಿ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ ಭಾರತೀಯ ರಾಯಭಾರ ಮಧ್ಯ ಪ್ರವೇಶಿಸಿದ ಪರಿಣಾಮ ಕಂಪೆನಿಯು ಯುವಕನಿಗೆ ವೇತನ ಸಹಿತ ರಜೆ ನೀಡಿತು. ಜೂ.27ರ ರಾತ್ರಿ ತ್ರಿಶೂಲ್‌ ಬೆಂಗಳೂರಿಗೆ ಬಳಿಕ ಶುಕ್ರವಾರ ಬೆಳಗ್ಗೆ ಮನೆ ತಲುಪಿದರು.

Advertisement

Udayavani is now on Telegram. Click here to join our channel and stay updated with the latest news.

Next