Advertisement

Captain Brijesh Chowta ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

11:54 PM Jun 05, 2024 | Team Udayavani |

ಮಂಗಳೂರು/ಬಂಟ್ವಾಳ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಬಿಜೆಪಿ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಬುಧವಾರ ದಿನವಿಡೀ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದ ಕಾರ್ಯ
ಕ್ರಮಗಳಲ್ಲಿ ಪಾಲ್ಗೊಂಡರು.

Advertisement

ಬೆಳಗ್ಗೆ ಸುಲ್ತಾನ್‌ ಬತ್ತೇರಿಯ ಸ್ವಸ್ತಿಕ ವಾಟರ್‌ಫ್ರಂಟ್‌ನಲ್ಲಿ ನಡೆದ ಪರಿಸರ ಮೈತ್ರಿ-ವನಮಹೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡರು. ಬಳಿಕ ಬೆಳ್ತಂಗಡಿಗೆ ತೆರಳಿ ಹಲ್ಲೆಗೊಳಗಾದ ಬಿಜೆಪಿ ಮುಖಂಡ ರಾಜೇಶ್‌ ಎಂ.ಕೆ. ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಂಗಳೂರಿನ ಬಿಜೆಪಿ ಪಕ್ಷದ ಕಚೇರಿಗೆ ಆಗಮಿಸಿದ ಅಹವಾಲು ಸ್ವೀಕರಿಸಿದರು. ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದರು.

ಅವರು ಬುಧವಾರ ರಾತ್ರಿ ದಿಲ್ಲಿಗೆ ತೆರಳಿ ಪ್ರಧಾನಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪೊಳಲಿ ದೇವಸ್ಥಾನಕ್ಕೆ ಭೇಟಿ: ಕ್ಯಾ| ಚೌಟ ಅವರು ಗೆಲುವಿನ ಹಿನ್ನೆಲೆ ಯಲ್ಲಿ ಮಂಗಳವಾರ ರಾತ್ರಿ ಬಿಜೆಪಿ ಕಾರ್ಯಕರ್ತರೊಂದಿಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಅರ್ಚಕ ಪದ್ಮನಾಭ ಭಟ್‌ ಪ್ರಾರ್ಥನೆ ನೆರವೇರಿಸಿ ಪ್ರಸಾದ ನೀಡಿದರು. ಆನುವಂಶಿಕ ಮೊಕ್ತೇಸರ, ಪವಿತ್ರಪಾಣಿ ಪಿ. ಮಾಧವ ಭಟ್‌, ಶ್ರೀಕಾಂತ್‌ ಮಯ್ಯ, ಬಂಟ್ವಾಳ ತಾ.ಪಂ.ಮಾಜಿ ಸದಸ್ಯರಾದ ವೆಂಕಟೇಶ್‌ ನಾವಡ ಪೊಳಲಿ, ಯಶವಂತ ಕೊಟ್ಯಾನ್‌ ಪೊಳಲಿ ಹಾಗೂ ಕಾರ್ಯಕರ್ತರು ಜತೆಗಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next