Advertisement

ಪುತ್ತೂರು ಹಾಗೂ ಕಡಬ ತಾಲೂಕು ಸಂಪರ್ಕ ಜೋಡುಕಾವಲಿನಲ್ಲಿ ಸೇತುವೆ ನಿರೀಕ್ಷೆ

09:43 PM Jan 05, 2021 | Team Udayavani |

ಸವಣೂರು: ಪುತ್ತೂರು ಹಾಗೂ ಕಡಬ ತಾಲೂಕನ್ನು ಜೋಡಿಸುವ ಜೋಡುಕಾವಲು ಎಂಬಲ್ಲಿ ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆ ಬಹಳ ಸಮಯಗಳಿಂದ ಇದ್ದರೂ ಈವರೆಗೂ ಈ ಕುರಿತು ಯಾವುದೇ ಪ್ರಗತಿ ಕಂಡಿಲ್ಲ. ಜನತೆಯ ಕೂಗು ಆಡಳಿತಕ್ಕೆ ಇನ್ನೂ ತಟ್ಟಿಲ್ಲ.

Advertisement

ಕಡಬ ತಾಲೂಕಿನ ಸವಣೂರು- ಕುಮಾರ ಮಂಗಲ ಶಾಲೆ ಬಳಿಯ ರಸ್ತೆಯ ಮೂಲಕ ಪುತ್ತೂರು ತಾಲೂಕಿನ ತಿಂಗಳಾಡಿ, ತೆಗ್ಗು ಮೊದಲಾದ ಭಾಗಗಳನ್ನು ಸಂಪರ್ಕಿ ಸಲು ಪುಣcಪ್ಪಾಡಿ ಗ್ರಾಮದ ಜೋಡು ಕಾವಲು ಎಂಬಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಈ ಭಾಗದ ಜನರು ಹಿಂದಿನಿಂದಲೇ ಮಂಡಿಸಿದ್ದಾರೆ.

ಪುಣ್ಚಪ್ಪಾಡಿಯಿಂದ ತಿಂಗಳಾಡಿ, ತೆಗ್ಗು, ಕೆದಂಬಾಡಿ ಗ್ರಾಮಗಳನ್ನು ಸಂಪರ್ಕಿ ಸಲು ಜೋಡುಕಾವಲಿನಲ್ಲಿ ಸೇತುವೆ ನಿರ್ಮಾಣವಾದರೆ ಸುಲಭ ವಾಗಲಿದೆ. ಈ ಭಾಗದ ಜನರು ಆ ಪ್ರದೇಶ ಗಳನ್ನು ಸಂಪರ್ಕಿಸಬೇಕಾದರೆ ಕುಮಾರ ಮಂಗಲದಿಂದ ಮಾಡಾವು ಮೂಲಕ ಅಥವಾ ಕುಮಾರಮಂಗಲ-ಸವಣೂರು- ಸರ್ವೆ-ಕೂಡುರಸ್ತೆ ಮೂಲಕ ಸಾಗಿ ಹೋಗ ಬೇಕಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾದರೆ ಈ ಭಾಗದ ಜನತೆಗೆ ಸುಲಭವಾಗಲಿದೆ.

ಸುಮಾರು 15 ಕಿ.ಮೀ. ಸುತ್ತು ದಾರಿ ಕ್ರಮಿಸುವುದು ತಪ್ಪುತ್ತದೆ. ತಿಂಗಳಾಡಿ, ತೆಗ್ಗು, ಕೆದಂಬಾಡಿ ಗ್ರಾಮ ದವರಿಗೆ ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ, ಸೌತಡ್ಕ ಮೊದಲಾದೆಡೆ ಹೋಗಬೇಕಾ ದರೆ ಪುತ್ತೂರಿಗೆ ತೆರಳಿ ಹೋಗಬೇಕಿದೆ.ಇಲ್ಲಿ ಸೇತುವೆ ನಿರ್ಮಾಣವಾದರೆ ಅವ ರಿಗೂ ಸಮಯ, ವೆಚ್ಚ ಕಡಿಮೆ ಯಾಗಲಿದೆ.

ರಸ್ತೆಯೂ ಅಭಿವೃದ್ಧಿಯಾಗಬೇಕು
ಜೋಡುಕಾವಲಿಗೆ ಸಂಪರ್ಕಿಸುವ ಪುತ್ತೂರು ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ತಿಂಗಳಾಡಿ-ತೆಗ್ಗು ರಸ್ತೆ ಅಭಿ ವೃದ್ಧಿಯಾಗಿದೆ. ಸುಳ್ಯ ಕ್ಷೇತ್ರ ವ್ಯಾಪ್ತಿಯ ಸವಣೂರು-ಕುಮಾರಮಂಗಲ ರಸ್ತೆಯೂ ಅಭಿವೃದ್ಧಿಯಾಗಿದೆ. ಆದರೆ ಕುಮಾರ ಮಂಗಲ-ಜೋಡುಕಾವಲು ರಸ್ತೆ ಇನ್ನೂ ಅಭಿವೃದ್ಧಿಯಾಗಿಲ್ಲ. ಈ ರಸ್ತೆಯನ್ನೂ ಅಭಿ ವೃದ್ಧಿ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ.

Advertisement

ಪ್ರಯತ್ನ ಮುಂದುವರಿದಿದೆ
ಜೋಡುಕಾವಲಿನಲ್ಲಿ ಸೇತುವೆ ನಿರ್ಮಾಣ ಬೇಡಿಕೆಯ ಕುರಿತು ಹಲವು ವರ್ಷಗಳಿಂದ ಉಭಯ ಕ್ಷೇತ್ರದ ಶಾಸ ಕರಿಗೆ, ಸಂಸದರಿಗೆ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದೇವೆ. ಇಲ್ಲಿ ಸೇತುವೆ ನಿರ್ಮಾಣವಾಗುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ. ಈ ಬಾರಿ ಸೇತುವೆ ನಿರ್ಮಾಣದ ಕಾರ್ಯಯೋಜನೆಗಳು ಆರಂಭವಾಗುವ ನಿರೀಕ್ಷೆ ಇದೆ.
-ಗಿರಿಶಂಕರ ಸುಲಾಯ, ಸದಸ್ಯರು, ಗ್ರಾ. ಪಂ.ಸವಣೂರು

ಸೇತುವೆ ಆಗಲೇಬೇಕಿದೆ
ಜೋಡುಕಾವಲಿನಲ್ಲಿ ಸೇತುವೆ ನಿರ್ಮಾಣ ಖಂಡಿತಾವಾಗಿಯೂ ಆಗಬೇಕಿದೆ. ಇದಕ್ಕಾಗಿ ಅನುದಾನ ಹೆಚ್ಚು ಬೇಕಾಗುತ್ತದೆ. ಶಾಸಕ ಅಂಗಾರ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
-ರಾಜೇಶ್ವರಿ ಕನ್ಯಾಮಂಗಲ, ಅಧ್ಯಕ್ಷರು, ಕಡಬ ತಾ.ಪಂ.

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next