Advertisement

ಸಂಪರ್ಕ ಸೇತುವೆ ಮುಳುಗಡೆ ತುಂಬಿ ಹರಿಯುತ್ತಿರುವ ಜಕ್ಕಲಮಡಗು ಜಲಾಶಯ

12:28 PM Oct 12, 2021 | Team Udayavani |

ದೊಡ್ಡಬಳ್ಳಾಪುರ: ಕೆಲ ದಿನಗಳಿಂದ ನಂದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ, ಜಕ್ಕಲಮಡಗು ಜಲಾ ಶಯ ತುಂಬಿ ಹರಿಯುತ್ತಿದ್ದು ಹಿನ್ನೀರಿನ ಮಟ್ಟ ಹೆಚ್ಚಳವಾಗಿ ಗುಂಗೀರ್ಲಹಳ್ಳಿ ಬಳಿಯ ಚಿಕ್ಕಬಳ್ಳಾಪುರ – ದೊಡ್ಡಬಳ್ಳಾಪುರ ಸಂಪರ್ಕ ಸೇತುವೆ ಮೇಲೆ ನೀರು ಹರಿಯುತ್ತಿದೆ.

Advertisement

ರಸ್ತೆಯಲ್ಲಿ ಹರಿಯುತ್ತಿರುವ ನೀರು: ಚಿಕ್ಕಬಳ್ಳಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಾದ ಜಕ್ಕಲ ಮಡಗು, ಗುಂಗೀರ್ಲ ಹಳ್ಳಿ ದೊಡ್ಡ ಬಳ್ಳಾಪುರ ತಾಲೂಕಿನ ಬಾಲೇನಹಳ್ಳಿ ಮುಂತಾದ ಊರುಗಳಿಂದ ದೊಡ್ಡ ಬಳ್ಳಾಪುರ – ಚಿಕ್ಕಬಳ್ಳಾಪುರ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಆದರೆ, ಸೇತುವೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಗ್ರಾಮಸ್ಥರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ;- ಮಳೆ ಬಂದರೂ ನಾಗರಕೆರೆಗೆ ಬಾರದ ಜೀವಕಳೆ

ಈ ಗ್ರಾಮಗಳಿಗೆ ಒಂದು ಬಾರಿ ಬರುವ ಸರ್ಕಾರಿ ಬಸ್‌ ಕೂಡ ಬರುವುದನ್ನು ನಿಲ್ಲಿಸಿದ್ದು, ವಿದ್ಯಾರ್ಥಿಗಳು ಶಾಲಾ – ಕಾಲೇಜುಗಳಿಗೆ ತೆರಳಲು ಸೇತುವೆ ಮೇಲೆ ಅಪಾಯಕಾರಿ ಮಟ್ಟದಲ್ಲಿ ಹರಿಯುವ ನೀರಿನಲ್ಲೇ ನಡೆದುಕೊಂಡು ಹೋಗಬೇಕಾದ ಪ್ರಮೇಯ ಉಂಟಾಗಿದೆ. ಯಾವುದೇ ಅವಘಡ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next