Advertisement
ಪ್ರತಿವರ್ಷ ಹಗ್ಗದ ಮೇಲೆ ಸರ್ಕಸ್ ಬೈಂದೂರು ಗ್ರಾ.ಪಂ ವ್ಯಾಪ್ತಿಯ ದೇವರ ಗದ್ದೆಯಲ್ಲಿ ಹತ್ತಿಪ್ಪತ್ತು ಕೃಷಿ ಕುಟುಂಬಗಳು ಇದ್ದು ಇಲ್ಲಿಗೆ ಯಾವುದೇ ರಸ್ತೆಯಿಲ್ಲ. ಈ ಊರಿನ ಸುತ್ತ ತೂದಳ್ಳಿ ಹೊಳೆ ಹರಿಯುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಇದನ್ನು ದಾಟಲು ಯಾವುದೇ ವ್ಯವಸ್ಥೆಗಳಿರಲಿಲ್ಲ. ಹಳ್ಳಿಯವರು ಚರ್ಚ್‌ನಿಂದ ಆರ್ಥಿಕ ನೆರವು ಪಡೆದು ಕಾಲುಸಂಕ ನಿರ್ಮಿಸಿಕೊಂಡಿದ್ದರು. ಆದರೆ ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ನೀರಿನ ಅಬ್ಬರಕ್ಕೆ ಕಾಲುಸಂಕ ಕೊಚ್ಚಿಹೋಗಿ ಕೇವಲ ಕಬ್ಬಿಣ ತಂತಿ ಮಾತ್ರ ಉಳಿದಿತ್ತು. ಹೀಗಾಗಿ ಜನ ಮಳೆಗಾಲದಲ್ಲಿ ಹೊರಗೆ ಬರುತ್ತಿರಲಿಲ್ಲ. ಒಂದೊಮ್ಮೆ ಬರಬೇಕಾದರೂ ತಂತಿ ಹಿಡಿದು ಹೊಳೆದಾಟಬೇಕಿತ್ತು. ಸ್ವಲ್ಪ ಯಾಮಾರಿದರೂ ನೀರು ಪಾಲಾಗುವುದರಲ್ಲಿ ಸಂಶಯವಿಲ್ಲ ಎಂಬಂತಿತ್ತು.
ದೇವರಗದ್ದೆ ಪರಿಸ್ಥಿತಿ ಬಗ್ಗೆ 2016ರಲ್ಲಿ ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಂದಿನ ಬೈಂದೂರು ತಹಶೀಲ್ದಾರರಾದ ರಾಜು ಮೊಗೇರ್ ಅವರು ಸೇತುವೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಬಳಿಕ ಸರ್ವೆ ಕಾರ್ಯ ನಡೆದಿದ್ದರೂ ಸೇತುವೆ ನಿರ್ಮಾಣವಾಗಿರಲಿಲ್ಲ. 2017ರಲ್ಲಿ ಮತ್ತೆ ವರದಿ ಪ್ರಕಟವಾಗಿತ್ತು. ಇದನ್ನು ಮಾನವಹಕ್ಕು ಆಯೋಗ ಗಂಭೀರವಾಗಿ ಪರಿಗಣಿಸಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿತ್ತು. ಬಳಿಕ ರಾಜ್ಯ ಸರಕಾರ 30/54 ಯೋಜನೆಯಡಿ ಸೇತುವೆಗಾಗಿ 20 ಲಕ್ಷ ಅನುದಾನ ಬಿಡುಗಡೆಗೊಳಿತ್ತು. ಕಾಮಗಾರಿ ಅಂತಿಮ ಹಂತದಲ್ಲಿ
ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.ಎರಡು ಕಡೆಗಳಲ್ಲಿ ಸೇತುವೆ ಸಂಪರ್ಕಕ್ಕೆ ಮಣ್ಣು ತುಂಬಿಸುವ ಕೆಲಸ ಮಾತ್ರ ಬಾಕಿ ಇದೆ. ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾದರೂ ಜನರಿಗೆ ಸೇತುವೆ ಸಿಕ್ಕ ತೃಪ್ತಿಯಿದೆ.
Related Articles
ಮಕ್ಕಳನ್ನು ಮಳೆಗಾಲದಲ್ಲಿ ನದಿ ದಾಟಿಸಲಾಗದೆ ಬೈಂದೂರು – ಶಿರೂರಿನಲ್ಲಿ ಬಾಡಿಗೆ ಮನೆ ಮಾಡಿ ಓದಿಸಬೇಕಾದ ಪರಿಸ್ಥಿತಿಯಿತ್ತು. ಆದರೆ ಉದಯವಾಣಿ ವರದಿಗೆ ಸರಕಾರ ಸ್ಪಂದಿಸಿದೆ. ಊರಿಗೆ ಸೇತುವೆ ಸಿಕ್ಕಿದೆ.
– ಸ್ಕರೀಯ ಕೊಸಳ್ಳಿ, ದೇವರಗದ್ದೆ
Advertisement