ಸುಳ್ಯ: ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ನಿಂತಿಕಲ್ಲು ಸಮೀಪದ ಕಲ್ಲೇರಿ ಎಂಬಲ್ಲಿ ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ವಾಹನ ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆ ಇದೆ. ಇದರೊಂದಿಗೆ ಶಿಥಿಲ, ಅಗಲ ಕಿರಿದಾಗ ಹಾಗೂ ಅಪಾಯಕಾರಿ ಸೇತುವೆಗೆ ಮುಕ್ತಿ ಸಿಗಲಿದೆ.
ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಕಲ್ಲೇರಿ ಎಂಬಲ್ಲಿ ಸಿಗುವ ತೋಡಿಗೆ ಈ ಹಿಂದೆ ಸೇತುವೆ ನಿರ್ಮಿಸ ಲಾಗಿದ್ದರೂ ಕಿರಿದಾಗಿತ್ತು. ಜತೆಗೆ ತಿರುವಿನ ಲ್ಲಿದ್ದುದರಿಂದ ಅಪಾಯ ಕಾರಿ ಸ್ಥಿತಿಯಲ್ಲಿತ್ತು. ಇಲ್ಲಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನೂತನ ಸೇತು ವೆಯು ಹಳೆ ಸೇತುವೆಯ ಪಕ್ಕದಲ್ಲಿ ನಿರ್ಮಾಣಗೊಂಡಿದೆ.
ಲೋಕೋಪಯೋಗಿ ಇಲಾಖೆಯ ಯೋಜನೆಯ ರಾಜ್ಯ ಹೆದ್ದಾರಿ ಸೇತು ವೆಗಳ ಸುಧಾರಣೆಯ 1.25 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾರ್ಯ ಒಂದೂವರೆ ವರ್ಷಗಳ ಹಿಂದೆ ಆರಂಭಗೊಂಡಿತ್ತು. ಸೇತುವೆ 14 ಮೀಟರ್ ಅಗಲ ಹೊಂದಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಡಾಮರು ಹಾಕುವ ಕಾಮಗಾರಿ ನಡೆಸಲಾಗಿದೆ. ಲೋಫ್ ಕನ್‌ಸ್ಟ್ರಕ್ಷನ್ ಸಂಸ್ಥೆಯವರು ಕಾಮಗಾರಿ ನಿರ್ವಹಿಸಿದ್ದಾರೆ.
ಅಂತಿಮ ಸ್ಪರ್ಶ ಬಾಕಿ
ರಾಜ್ಯ ಹೆದ್ದಾರಿಗಳ ಸೇತುವೆ ಸುಧಾರಣೆಯಡಿ ಕಲ್ಲೇರಿಯಲ್ಲಿ ಹೊಸ ಸೇತುವೆ ನಿರ್ಮಾಣಗೊಂಡಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ ಬಾಕಿ ಇದೆ. ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಮುಂದೆ ಸಂಬಂಧ ಪಟ್ಟವರಲ್ಲಿ ಚರ್ಚಿಸಲಾಗುವುದು.
–ಪರಮೇಶ್ವರ್, ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಸುಳ್ಯ