Advertisement

Bridge collapse ; ಬಿಹಾರ ಅಲ್ಲ ಕಾರವಾರದ ಮುಖ್ಯ ರಸ್ತೆಯಲ್ಲೆ ಕುಸಿದು ಬಿದ್ದ ಸೇತುವೆ!!

09:53 AM Aug 07, 2024 | Team Udayavani |

ಕಾರವಾರ: ಕಾರವಾರದ ಕಾಳಿ ನದಿಗೆ ಕಟ್ಟಿರುವ ಹಳೆಯ ಸೇತುವೆ ಬುಧವಾರ(ಆಗಸ್ಟ್೭) ಬೆಳಗಿನ ಜಾವ ಕುಸಿದಿದೆ. ಸೇತುವೆಯ ಮೇಲೆ ಚಲಿಸುತ್ತಿದ್ದ ಲಾರಿ ನದಿಗೆ ಬಿದ್ದಿದೆ.ಅದುಕಾರವಾರ ದಿಂದ ಗೋವಾ ಕಡೆಗೆ ತೆರಳುತ್ತಿತ್ತು.

Advertisement

ಸೇತುವೆ ಕುಸಿದ ತತ್ ಕ್ಷಣ ಲಾರಿ ಚಾಲಕ ಮುರುಗನ್ ಲಾರಿಯ ಕ್ಯಾಬಿನ್ ಹತ್ತಿ ಕೂಗಿಕೊಂಡಿದ್ದು ದಂಡೆಯಲ್ಲಿದ್ದವರು ಈ ಘಟನೆ ನೋಡಿ ಕರಾವಳಿ ಕಾವಲು ಪಡೆಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ನದಿಗೆ ಇಳಿದ ಕರಾವಳಿ ಕಾವಲು ಪಡೆ, ಆಗ್ನಿ ಶಾಮಕದಳ , ಮೀನುಗಾರಿಕಾ ದೋಣಿಯಲ್ಲಿದ್ದವರು, ಚಾಲಕ ಮುರುಗನ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಧ್ಯರಾತ್ರಿ ಕಳೆದ ನಂತರ ಈ ದುರ್ಘಟನೆ ನಡೆದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕಾಳಿ‌ ನದಿಗೆ ಕಟ್ಟಿದ ಹಳೆಯ ಸೇತುವೆ ಇದಾಗಿದ್ದು, ವಾಹನ ಸಂಚಾರ ಚಾಲ್ತಿಯಲ್ಲಿತ್ತು. ಘಟನೆ ನಂತರ ಕಾರವಾರ ,ಸದಾಶಿವಗಡ, ಗೋವಾ ಮಧ್ಯೆ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ , ಎಸ್ಪಿ ಭೇಟಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುವ ಕಾಳಿ ನದಿಗೆ ಈ ಸೇತುವೆಯನ್ನು ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದ ಕಾಲದಲ್ಲಿ ನಿರ್ಮಿಸಲಾಗಿತ್ತು. ನಾಲ್ಕು ದಶಕಗಳ ಹಿಂದೆ ಕಾಳಿ ನದಿಗೆ ನಿರ್ಮಿಸಿದ ಸೇತುವೆ ಇದಾಗಿತ್ತು. ಇದರ ಪಕ್ಕದಲ್ಲಿ ಹೊಸ ಸೇತುವೆ ಸಹ ಮೂರು ವರ್ಷಗಳ ಹಿಂದೆ ನಿರ್ಮಿಸಿ ಬಳಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next