ಕಾಳಗಿ: ಮನೆ ಮಂಜೂರಿಗೆ ಯಾರಾದ್ರೂ ಹಣ ಕೇಳಿದರೆ ತಿಳಿಸಿ ಎಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಹೇಳಿದರು.
ಇಲ್ಲಿನ ಕೊಳೆಗೇರಿ ನಿವಾಸಿಗಳಿಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮಂಜೂರಾದ 48 ಕೋಟಿ ರೂ. ಮೊತ್ತದ 737 ಮನೆಗಳಿಗೆ ಅಡಿಗಲ್ಲು ಹಾಗೂ ರೌದ್ರಾವತಿ ನದಿಗೆ 5 ಕೋಟಿ ರೂ. ಮೊತ್ತದ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮನೆ ಇಲ್ಲದ, ಹಣ ಇಲ್ಲದ ಬಡವರಿಗಾಗಿ ಮನೆ ಕಟ್ಟಿಸಿಕೊಡುವ ಉದ್ದೇಶದಿಂದಲೇ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ತಂದಿದೆ. ಆದ್ದರಿಂದ ಮನೆಗಳನ್ನು ಪಡೆಯುವಾಗ ಅರ್ಹ ಫಲಾನುಭವಿಗಳು ಅಧಿಕಾರಿಗಳು, ರಾಜಕೀಯ ಮುಖಂಡರು, ಕಾರ್ಯಕರ್ತರು ಅಥವಾ ಇನ್ಯಾರಿಗೂ ಸರ್ಕಾರ ನಿಗದಿ ಪಡಿಸಿದ ಹಣಕ್ಕಿಂತ ಹೆಚ್ಚಿಗೆ ಹಣ ಕೊಡುವ ಅಗತ್ಯವಿಲ್ಲ ಎಂದರು.
ಶಾಸಕ ಡಾ| ಅವಿನಾಶ ಜಾಧವ ಮಾತನಾಡಿ ರೌದ್ರಾವತಿ ನದಿಗೆ ಕಟ್ಟುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ರೈತರು, ಸಾರ್ವಜನಿಕರು ಹಾಗೂ ಪರಿಸರಕ್ಕೆ ಆಗುವ ಅನುಕೂಲತೆಗಳ ಕುರಿತು ತಿಳಿಸಿದರು.
ಬಿಜೆಪಿ ಓಬಿಸಿ ಘಟಕದ ಜಿಲ್ಲಾ ಕೋಶಾಧ್ಯಕ್ಷ ರಾಜಕುಮಾರ ರಾಜಾಪುರ, ಚಿಂಚೋಳಿ ಮಂಡಲ ಕಾರ್ಯದರ್ಶಿ ಶೇಖರ ಪಾಟೀಲ, ಪ್ರಮುಖರಾದ ಉಮೇಶ ಚವ್ಹಾಣ, ಲಕ್ಷ್ಮಣ ಆವುಂಟಿ, ಬಸವರಾಜ ಬೆಣ್ಣೂರಕರ್, ಮಲ್ಲಿನಾಥ ಕೋಲಕುಂದಿ, ಚಂದ್ರಕಾಂತ ಜಾಧವ, ಸಂತೋಷ ಜಾಧವ, ಸಂತೋಷ ಮಂಗಲಗಿ, ಶಿವಶರಣಪ್ಪ ಗುತ್ತೇದಾರ, ಕಾಳಶೆಟ್ಟಿ ಪಡಶೆಟ್ಟಿ, ಕೇಸು ಚವ್ಹಾಣ, ರಮೇಶ ಕಿಟ್ಟದ, ಪ್ರಶಾಂತ ಕದಂ, ವಿಷ್ಣುಕಾಂತ ಪರುತೆ, ಸುನೀಲ ರಾಜಾಪುರ ಮತ್ತಿತರರು ಇದ್ದರು.