Advertisement

ಆಂಧ್ರ ಬಸ್‌ನಲ್ಲಿ ಇಟ್ಟಿಗೆ ಸಾಗಾಟ!

12:02 PM May 05, 2020 | mahesh |

ಮೊಳಕಾಲ್ಮೂರು: ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಪ್ರಯಾಣಿಕರು ಸಂಚರಿಸುವ ಆಂಧ್ರದ ಸರ್ಕಾರಿ ಬಸ್‌ನಲ್ಲಿ ಪಟ್ಟಣದಿಂದ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಸರ್ಕಾರಿ ಬಸ್‌ ಸೀಜ್‌ ಮಾಡಲಾಗಿದೆ. ಆಂಧ್ರಪ್ರದೇಶ ಸಾರಿಗೆ ಇಲಾಖೆ ಅನುಮತಿ ಪತ್ರವನ್ನು ಸರ್ಕಾರಿ ಬಸ್‌ಗೆ ಅಂಟಿಸಿಕೊಂಡು ಚೆಕ್‌ಪೋಸ್ಟ್‌ ಮೂಲಕ ನಿರಾಂತಕವಾಗಿ ಮೊಳಕಾಲ್ಮೂರು ಪಟ್ಟಣಕ್ಕೆ ಪ್ರವೇಶಿಸಿ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಸರ್ಕಾರಿ ಬಸ್‌ನಲ್ಲಿ ಸುಮಾರು

Advertisement

3-4 ದಿನಗಳಿಂದಲೂ ನಿತ್ಯವೂ 6 ಸಾವಿರ ಇಟ್ಟಿಗೆಗಳನ್ನು ಸಾಗಿಸಲಾಗುತ್ತಿತ್ತು. ಪಟ್ಟಣದಲ್ಲಿನ ಇಟ್ಟಿಗೆ ಭಟ್ಟಿಯೊಂದರಲ್ಲಿ ಇಟ್ಟಿಗೆಯನ್ನು ಲೋಡ್‌ ಮಾಡಿಕೊಂಡು ಆಂಧ್ರದ ರಾಯದುರ್ಗ ಮಾರ್ಗವಾಗಿ ಹೋಗಲಾಗುತ್ತಿತ್ತು. ಪಟ್ಟಣದ ಪ್ರಯಾಣಿಕರು ಬಸ್‌ ನಿಲ್ಲಿಸಿ ಪರಿಶೀಲಿಸಿದಾಗ ಬಸ್‌ನಲ್ಲಿ ಇಟ್ಟಿಗೆ ತುಂಬಿಕೊಂಡಿರುವುದು ಪತ್ತೆಯಾಗಿದೆ. ಈ ಬಸ್‌ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಬಸ್‌ ಚಾಲಕ ಮತ್ತು ಎಪಿಎಸ್‌ ಆರ್‌ಟಿಸಿ ಬಸ್‌ ಅಧಿಕಾರಿಯನ್ನು ವಿಚಾರಣೆಗೊಳಪಡಿಸಿದಾಗ ಅನಂತಪುರ ಜಿಲ್ಲೆ

ಉರುವಕೊಂಡ ಪ್ರದೇಶದ ಬಸ್‌ ನಿಲ್ದಾಣದ ಕಾಮ ಗಾರಿಗೆ ಇಟ್ಟಿಗೆಯನ್ನು ಕೊಂಡೊಯ್ಯಲಾಗುತ್ತಿತ್ತು. ಈ ಬಗ್ಗೆ ಆಂಧ್ರದ ಸಾರಿಗೆ ಇಲಾಖೆ ಅಧಿಕಾರಿಗಳ ಅನುಮತಿ ಪತ್ರ ಪಡೆಯಲಾಗಿತ್ತು. ಈ ಬಗ್ಗೆ ತಹಶೀಲ್ದಾರ್‌ ಎಂ.ಬಸವರಾಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next