Advertisement

ಲಂಚದ ಬೇಡಿಕೆ ಪ್ರಕರಣ: ಹೊಸ ವಿಚಾರಣಾ ಸಮಿತಿ ರಚನೆಗೆ ಸೂಚನೆ

05:16 AM Jun 14, 2020 | Lakshmi GovindaRaj |

ಬೆಂಗಳೂರು: ಲಂಚ ನೀಡಿಲ್ಲ ಎಂಬ ಕಾರಣಕ್ಕೆ ಸರ್ಜರಿ (ಶಸ್ತ್ರಚಿಕಿತ್ಸೆ) ವಿಷಯ ದ ಪ್ರಾಯೋಗಿಕ ಪರೀಕ್ಷೆಯಲ್ಲಿ ಕಲಬುರಗಿಯ ಖಾಜಾ ಬಂದೆನವಾಜ್‌ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ 4ನೇ ವರ್ಷದ 7 ಮಂದಿ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಪ್ರಾಧ್ಯಾಪಕರು ಅನುತ್ತೀರ್ಣಗೊಳಿಸಿದ ಆರೋಪಕ್ಕೆ ಸಂಬಂಧಿಸಿದ ವಿಚಾರಣಾ ವರದಿಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

Advertisement

ಪ್ರಕರಣದ ಕುರಿತು ವಿಚಾರಣೆಗೆ ಆದೇಶಿಸಬೇಕು ಹಾಗೂ ಮತ್ತೆ ಪ್ರಾಯೋಗಿಕ ವಿಷಯ ಪರೀಕ್ಷೆ  ನಡೆಸಲು ವಿವಿಗೆ ಆದೇಶಿಸುವಂತೆ ಕೋರಿ ವಿನೋದಿನಿ ಸೇರಿದಂತೆ 7 ಮಂದಿ ಎಂಬಿಬಿಎಸ್‌ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯು ನ್ಯಾ. ಎಚ್‌.ಟಿ. ನರೇಂದ್ರ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯ ಪೀಠದ ಮುಂದೆ ವಿಚಾರಣೆಗೆ  ಬಂದಿತ್ತು. ಅರ್ಜಿದಾರರ ಪರ ರಹಮತ್‌ ಉಲ್ಲಾ ಕೋತ್ವಾಲ್‌ ವಾದ ಮಂಡಿಸಿದರು.

ಆರೋಪ ಕೇಳಿ ಬಂದಿದೆಯೋ ಅದೇ ಕಾಲೇಜಿನ ಪ್ರಾಧ್ಯಾಪಕರನ್ನೊಳ್ಳಗೊಂಡ ಸಮಿತಿಯ ವಿಚಾರಣಾ ವರದಿ ಬಗ್ಗೆ ಅರ್ಜಿದಾರರು ಅಕ್ಷೇಪ ಎತ್ತಿದ್ದರು.  ಆದ್ದರಿಂದ ಆ ವರದಿಯನ್ನು ರದ್ದುಗೊಳಿಸಿ ರುವ ಹೈಕೋರ್ಟ್‌, ಹೊಸದಾಗಿ ಸಮಿತಿ ರಚಿಸಬೇಕು. ಇದರಲ್ಲಿ ಬೇರೆ ಕಾಲೇಜಿನ ಪ್ರಾಧ್ಯಾಪಕರು ಇರಬೇಕು. ಈ ಸಮಿತಿ ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು. ಸಮಿತಿ ರಚನೆ ಹಾಗೂ ವರದಿ  ಸಲ್ಲಿಸುವ ಪ್ರಕ್ರಿಯೆ 15 ದಿನಗಳಲ್ಲಿ ಪೂರ್ಣ ಗೊಳಿಸಲು ಕಾಲೇಜಿಗೆ ನಿರ್ದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next