ಇಸ್ಲಮಾಬಾದ್: ಪಾಕಿಸ್ಥಾನದ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ತನ್ನ ಬೌಲಿಂಗ್ ಗಿಂತ ಬ್ಯಾಟಿಂಗ್ ನಲ್ಲೇ ಹೆಚ್ಚು ಮಿಂಚಿದವರು. ಆದರೆ ತನ್ನ ಬೌಲಿಂಗ್ ಎದುರಿಸಲು ದಿಗ್ಗಜ ಬ್ರಿಯಾನ್ ಲಾರಾ ಕೂಡಾ ಕಷ್ಟ ಪಡುತ್ತಿದ್ದರು ಎಂದು ಹಫೀಜ್ ಹೇಳಿದ್ದಾರೆ.
ಎಡಗೈ ಬ್ಯಾಟ್ಸಮನ್ ಗಳು ಯಾವತ್ತೂ ನನ್ನ ಬೌಲಿಂಗ್ ಗೆ ಚಡಪಡಿಸುತ್ತಿದ್ದರು. ಬಲಗೈ ಆಟಗಾರರಿಗೂ ಉತ್ತಮ ಬೌಲಿಂಗ್ ಮಾಡುತ್ತಿದೆ. ನನ್ನ ಸರಾಸರಿ ನೋಡಿದರೆ ಗೊತ್ತಾಗುತ್ತದೆ. ನನ್ನ ಇಷ್ಟದ ಆಟಗಾರ ಬ್ರಿಯಾನ್ ಲಾರಾರನ್ನು ಕೂಡಾ ನಾನು ಔಟ್ ಮಾಡಿದ್ದೇನೆ ಎಂದು ಹಫೀಜ್ ಹೇಳಿದ್ದಾರೆ.
ನನ್ನ ಬೌಲಿಂಗ್ ಗೆ ಬ್ಯಾಟಿಂಗ್ ನಡೆಸುವುದು ಕಷ್ಟ ಎಂದು ಲಾರಾ ಸ್ವತಃ ನನ್ನಲ್ಲಿ ಹೇಳಿಕೊಂಡಿದ್ದಾರೆ ಎಂದಿದ್ದಾರೆ ಹಫೀಜ್.
ನನ್ನ ವೃತ್ತಿ ಜೀವನದಲ್ಲಿ ಬೌಲಿಂಗ್ ನನಗೆ ತುಂಬಾ ಸಹಕಾರಿಯಾಗಿದೆ. ಕೆಲವು ಪಂದ್ಯದಲ್ಲಿ ಬ್ಯಾಟಿಂಗ್ ಕೈಕೊಟ್ಟಾಗ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದಿದ್ದಾರೆ ಹಫೀಜ್.
ಏಕದಿನ ಕ್ರಿಕೆಟ್ ನಲ್ಲಿ 218 ಪಂದ್ಯವಾಡಿರುವ ಹಫೀಜ್ 139 ವಿಕೆಟ್ ಪಡೆದಿದ್ದಾರೆ.