Advertisement
ಬಹುದೇವಾತಾರಾಧನೆ, ಗೋವುಗಳನ್ನು ಪೂಜಿಸುವುದು ಬಹಳ ಅಣಕಕ್ಕೊಳಗಾಗಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಂದೂ ವಿದ್ಯಾರ್ಥಿಗಳನ್ನು ಕಾಫಿರ್ ಎಂದು ಕರೆಯುತ್ತಾರೆ. ಭಾರತದಲ್ಲಿ ನಡೆಯುವ ವಿವಿಧ ಬೆಳವಣಿಗೆಗಳ ವೇಳೆಯಲ್ಲೆಲ್ಲ ಇಂಗ್ಲೆಂಡ್‌ನಲ್ಲಿನ ಹಿಂದೂ ವಿದ್ಯಾರ್ಥಿಗಳು ಹಿಂಸೆ ಎದುರಿಸುತ್ತಿದ್ದಾರೆ. ವಿಶೇಷವಾಗಿ ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇದು ಹೆಚ್ಚಿದೆ ಎಂದು ಹಿಂದೂ ಪೋಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟು 998 ಹಿಂದೂ ಪೋಷಕರು ತಮ್ಮ ಅಭಿಪ್ರಾಯ ನೀಡಿದ್ದಾರೆ. 400 ವರ್ಷಗಳ ಕಾಲ ಬ್ರಿಟೀಷರು ಆಳ್ವಿಕೆ ನಡೆಸಿದ್ದರೂ, ಅವರಿಗೆ ಹಿಂದೂಗಳ ಆಚರಣೆಯ ಬಗ್ಗೆ ಇನ್ನೂ ಅರಿವು ಇಲ್ಲ. ಶಾಲೆಗಳಲ್ಲಿ ಹಿಂದೂ ಧರ್ಮದ ಬಗ್ಗೆ ಇರುವ ಅಧ್ಯಾಯ ಧರ್ಮವನ್ನೇ ಅಣಕಿಸುವಂತಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಹಿಂದೂ ವಿದ್ಯಾರ್ಥಿಗಳು ಸಸ್ಯಾಹಾರ ಸೇವಿಸುವುದು, ಧಾರ್ಮಿಕ ಆಚರಣೆಗಳು, ಬಹುದೇವಾತಾರಾಧನೆ, ಗೋವನ್ನು ಪೂಜಿಸುವುದನ್ನೆಲ್ಲ ಮುಸ್ಲಿಂ, ಕ್ರೈಸ್ತ ವಿದ್ಯಾರ್ಥಿಗಳು ಅಪಹಾಸ್ಯ ಮಾಡುತ್ತಾರೆ. ಒಬ್ಬಳು ಬಾಲಕಿಯ ಮೇಲೆ ಗೋಮಾಂಸವನ್ನು ಎಸೆಯಲಾಗಿದೆ. ಒಬ್ಬ ಮುಸ್ಲಿಂ ವಿದ್ಯಾರ್ಥಿ ಇಸ್ಲಾಂಗೆ ಮತಾಂತರವಾದರೆ ನಿಮಗೆ ತೊಂದರೆ ಮಾಡುವುದನ್ನು ನಿಲ್ಲಿಸುತ್ತೇವೆಂದು ಹೇಳಿದ್ದಾನೆ. ಒಬ್ಬ ಕ್ರೈಸ್ತ ವಿದ್ಯಾರ್ಥಿ, ಹಿಂದೂ ದೇವತೆಗಳನ್ನು ಕ್ರಿಸ್ತ ನರಕಕ್ಕೆ ಕಳಿಸುತ್ತಾನೆಂದು ಹೀಯಾಳಿಸಿದ್ದಾನೆ. ಇದರಿಂದ ಮಕ್ಕಳು ಶಾಲೆಗೆ ಹೋಗಲು ಒಪ್ಪುತ್ತಿಲ್ಲ ಎಂದು ಪೋಷಕರು ಹೇಳಿದ್ದಾರೆ.