Advertisement

ಹೆಮ್ಮಾಡಿ ಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಸಚಿವರಿಗೆ ಸಂಸದರ ಪತ್ರ

12:29 AM Dec 31, 2024 | Team Udayavani |

ಕುಂದಾಪುರ: ಉಡುಪಿ ಜಿಲ್ಲೆಯಲ್ಲೇ ವಿಶಿಷ್ಟವಾಗಿರುವ ಹೆಮ್ಮಾಡಿ ಭಾಗದಲ್ಲಿ ಮಾತ್ರ ಬೆಳೆಯುವ ಹೆಮ್ಮಾಡಿ ಸೇವಂತಿಗೆ ತಳಿಯನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರಿಗೆ ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದಿದ್ದಾರೆ.

Advertisement

ಹೆಮ್ಮಾಡಿ ಸೇವಂತಿಗೆ ತಳಿಯು ಅತಿ ವಿಶಿಷ್ಟವಾಗಿದ್ದು, ತನ್ನ ಪರಿಮಳ, ಅಂದ ಹಾಗೂ ಧಾರ್ಮಿಕ ಮಹತ್ವದ ಕಾರಣಗಳಿಂದ ಹೆಮ್ಮಾಡಿ ಭಾಗದ ಬೆಳೆಗಾರರಿಗೆ ಜೀವನಾಧಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿರುವ ಹವಾಮಾನ ವ್ಯತ್ಯಾಸಗಳು, ವಿಪರೀತ ಮಳೆ, ಚಳಿಯಿಂದ ಈ ಬೆಳೆ ಸಂಕಷ್ಟದಲ್ಲಿದೆ. ಈ ಬಾರಿ ರೈತರು ಬೇರೆ ಕಡೆಗಳಿಂದ ಸೇವಂತಿಗೆ ಗಿಡಗಳನ್ನು ತಂದು ನೆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ವಿಶಿಷ್ಟ ತಳಿಯೊಂದರ ಉಳಿವಿನ ಬಗ್ಗೆ ಆತಂಕ ಸೃಷ್ಟಿಯಾಗಿದ್ದು, ತಾವು ತತ್‌ಕ್ಷಣ ಈ ತಳಿಯ ಸಂರಕ್ಷಣೆಗೆ ಪೂರಕ ಕ್ರಮ ಕೈಗೊಳ್ಳುವಂತೆ ಸಂಸದರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಉದಯವಾಣಿ ವರದಿ
ಹೆಮ್ಮಾಡಿ ಸೇವಂತಿಗೆ ತಳಿಯ ಗಿಡಗಳು ಮಳೆಗೆ ನಾಶವಾಗಿರುವ ಬಗ್ಗೆ, ಬೇರೆ ತಳಿಯ ಹೂವು ಬೆಳೆದ ಕುರಿತಂತೆ, ವಿಶಿಷ್ಟವಾದ ಈ ಹೆಮ್ಮಾಡಿ ಸೇವಂತಿಗೆ ತಳಿಯು ಆತಂಕದಲ್ಲಿರುವ ಬಗ್ಗೆ “ಉದಯವಾಣಿ’ಯು ಡಿ.23ರಂದು ವಿಶೇಷ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next