Advertisement
“ಎಣ್ಣೆಗೂ ಹೆಣ್ಣಿಗೆ ಎಲ್ಲಿಂದ ಲಿಂಕ್ ಇಟ್ಟೆ ಭಗವಂತ’ ಎಂಬ ಹಾಡನ್ನು ಚಿತ್ರತಂಡ ಇತ್ತೀಚೆಗೆ ರಿಲೀಸ್ ಮಾಡಿದೆ. ಅರ್ಜುನ್ ಜನ್ಯಾ ಸಂಗೀತದ ಈ ಹಾಡನ್ನು ಮಂಗ್ಲಿ ಹಾಡಿದ್ದಾರೆ. ಇತ್ತೀಚೆಗೆ ನಡೆದ ಕಲರ್‌ಫುಲ್ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಜೊತೆಯಾಗಿತ್ತು. “ಏಕ್ ಲವ್ಯ ಯಾ’ ಚಿತ್ರ ಜ.21ಕ್ಕೆ ಬಿಡುಗಡೆಯಾಗುತ್ತಿದ್ದು, ಚಿತ್ರವನ್ನು ರಕ್ಷಿತಾ ಫಿಲಂ ಫ್ಯಾಕ್ಟರಿನಡಿ ರಕ್ಷಿತಾ ನಿರ್ಮಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ರಕ್ಷಿತಾ, “ನಿರ್ಮಾಣ ವಿಚಾರದಲ್ಲಿ ಪ್ರೇಮ್ ಯಾವುದೇ ಟೆನÒನ್ ನನಗೆ ಕೊಟ್ಟಿಲ್ಲ .ಎಲ್ಲವನ್ನು ಅವರೇ ಹ್ಯಾಂಡಲ್ ಮಾಡಿದ್ದಾರೆ.
Related Articles
Advertisement
“ನಾವು ಏನೇ ಸಂಗೀತ ಮಾಡಿರಬಹುದು, ಅದರ ಪಕ್ಕಾ ಪ್ರೇಮ್ಸ್ ಎಂದು ಬಿದ್ದಾಗ ಅದರ ವ್ಯಾಲ್ಯೂ ಹೆಚ್ಚುತ್ತದೆ. ಪ್ರೇಮ್ ಯಾವುದಕ್ಕೂ ಕೊರತೆ ಮಾಡಿಲ್ಲ. ವಿದೇಶದಲ್ಲಿ ಲೈವ್ ರೆಕಾರ್ಡಿಂಗ್ ಮಾಡಿ, ದೊಡ್ಡ ಮೊತ್ತದ ಬಿಲ್ ಬಂದಾಗಲೂ ಪ್ರೇಮ್ ತಲೆಕೆಡಿಸಿಕೊಳ್ಳದೇ, ಹಾಡು ಚೆನ್ನಾಗಿ ಬಂದರೆ ಸಾಕು ಎಂದರು. ಅದು ಅವರ ಸಿನಿಮಾ, ಸಂಗೀತದ ಮೇಲಿನ ಪ್ರೀತಿ. ನಿಜಕ್ಕೂ ಇಡೀ ತಂಡ ಫ್ಯಾಮಿಲಿ ಥರಾನೇ ಇತ್ತು’ ಎನ್ನುವುದು ಅರ್ಜುನ್ ಜನ್ಯಾ ಮಾತು.
ನಾಯಕ ರಾಣಾ, ನಾಯಕಿಯರಾದ ರಚಿತಾ ರಾಮ್, ರೀಷ್ಮಾ ವೇದಿಕೆ ಮೇಲಿದ್ದರೂ ಅವರಿಗೆ ಸಿನಿಮಾ ಬಗ್ಗೆ ಮಾತನಾಡಲು ನಿರೂಪಕ ಅಕುಲ್ ಅವಕಾಶ ಮಾಡಿಕೊಡಲಿಲ್ಲ. ಅವರನ್ನು ಹಾಡು, ಡ್ಯಾನ್ಸ್, ಬ್ರೇಕಪ್ ಪ್ರಶ್ನೆಗಳಿಗಷ್ಟೇ ಸೀಮಿತಗೊಳಿಸಲಾಯಿತು.