Advertisement
1973ರಲ್ಲಿ ಒಪ್ಪಂದಗಳಿಗೆ ಸಹಿ ಹಾಕಿ ಯುರೋಪಿಯನ್ ಒಕ್ಕೂಟದ ಒಳಗೆ ಸೇರಿದ್ದ ಯುಕೆ ಈಗ ಹೊರಬರಲು ಏನೇನು ಶರತ್ತುಗಳನ್ನು ವಿಧಿಸಲಾಗಿದೆ ಎಂದು ಪ್ರತಿವಾರವೂ ತನ್ನ ಪ್ರತಿನಿಧಿಗಳನ್ನು ಯೂರೋಪಿಗೆ ಕಳುಹಿಸಿ ಚರ್ಚಿಸುತ್ತಿದೆ, ಬರೇ ಚರ್ಚಿಸುತ್ತಿದೆ! ಯೂರೋಪಿನಲ್ಲಿ ಎಲ್ಲ ಯುದ್ಧಗಳೂ ದುಡ್ಡಿಗೋಸ್ಕರ ಎನ್ನುವ ಒಂದು ಮಾತಿದೆ. ಯೂರೋಪಿಯನ್ ಒಕ್ಕೂಟ ಮತ್ತು ಯುಕೆಯ ಮಧ್ಯದ “ಬ್ರೆಕ್ಸಿಟ್ ಮಾತುಕತೆ’ಯೂ ಯುಕೆಯು ಯುರೋಪ್‌ಗೆ ಎಷ್ಟು ವಿಚ್ಛೇದನ ಶುಲ್ಕ ಕೊಡಬೇಕು ಎನ್ನುವುದರ ಸುತ್ತವೇ ನಡೆಯುತ್ತಿದೆ. ಯುರೋಪ್ ಒಕ್ಕೂಟದ ಹುಂಡಿಗೆ ವರ್ಷಕ್ಕೆ ಬಿಲಿಯನ್‌ಗಟ್ಟಲೆ ಯೂರೋ ಹಣಕೊಡುತ್ತಿದ್ದ ಯುಕೆಯು ಹೀಗೆ ಬಿಟ್ಟು ಹೋಗುತ್ತಿರುವುದು ಯುರೋಪಿಯನ್ ಒಕ್ಕೂಟಕ್ಕೆ ಆಘಾತವನ್ನು ಉಂಟುಮಾಡಿದೆ. ಮತ್ತೆ ಜರ್ಮನಿ ಮತ್ತು ಬ್ರಿಟನ್ ಮಧ್ಯದ ಹಳೆಯ ಮನಸ್ತಾಪಗಳನ್ನೂ ಮೆಲಕು ಹಾಕುವಂತೆ ಮಾಡಿದೆ. “ನೂರು ಬಿಲಿಯನ್ ಜುರ್ಮಾನ ತುಂಬಿ ಎಲ್ಲಿ ಬೇಕಾದರೂ ಹೋಗು’ ಎಂದು ಮುನಿಸಿಕೊಂಡು ಯುರೋಪಿಯನ್ ಒಕ್ಕೂಟ ಬ್ರಿಟನ್‌ಗೆ ಹೇಳಿದೆ. ಇದು ದಿನ ವಾರ ತಿಂಗಳೊಳಗೆ ಮುಗಿಯುವ ಸಂಧಾನದ ವಾದ ಅಲ್ಲ.
Related Articles
Advertisement
ಬ್ರಿಟನ್ ಯೂರೋಪಿನ ಒಕ್ಕೂಟದೊಳಗೆ ಸೇರಿದ ಕಾಲದಿಂದ ಬ್ರಿಟನ್ನಿನ ತೀರದಿಂದ 200 ಮೈಲುವರೆಗಿನ ಸಮುದ್ರವನ್ನು ಯೂರೋಪಿನ ದೇಶಗಳ ಮೀನುಗಾರರ ಜೊತೆಗೆ ಸಮಾನವಾಗಿ ಹಂಚಿಕೊಳ್ಳಬೇಕಾಯಿತು. ಸಹಜವಾಗಿ ಬ್ರಿಟಿಶ್ ಮೀನುಗಾರರಿಗೆ ಸಿಗುವ ಮೀನುಗಳ ಪಾಲು ಕಡಿಮೆ ಆಯಿತು. ಶತಮಾನಗಳಿಂದ ಮೀನುಗಾರಿಕೆ ಮಾಡುತ್ತ ಬಂದ ಬಂದರುಗಳು ಬಂಜರಾಗಿ ಮುಚ್ಚಬೇಕಾಯಿತು. ತೀರದಿಂದ ಬರಿಯ 12 ಮೈಲು ವ್ಯಾಪ್ತಿಯೊಳಗೆ ನಡೆಯುವ ಸಣ್ಣ ಮೀನುಗಾರಿಕೆಯಲ್ಲೂ ಫ್ರಾನ್ಸ್, ಸ್ಪೆಯಿನ್ ದೇಶಗಳ ಮೀನುಗಾರರ ಜೊತೆ ಸ್ಪರ್ಧಿಸುವ ಪರಿಸ್ಥಿತಿ ಬಂತು.
ಯುಕೆಯು ಯೂರೋಪಿನ ಕೂಟದ ಒಳಗೇ ಇರಬೇಕೆಂದು ವಾದಿಸುವವರು, ಬ್ರಿಟನ್ನಿನ ಕಾರ್ಮಿಕ ಕೆಲಸಗಳಿಗೆ ಯುರೋಪಿನಿಂದ ಸುಲಭವಾಗಿ ದೊರೆಯುವ ಜನಶಕ್ತಿ, ಯುರೋಪ್ ಮತ್ತು ಯುಕೆಯ ನಡುವೆ ಗಡಿಯಿಲ್ಲದ ತಡೆರಹಿತ ವ್ಯಾಪಾರ ವ್ಯವಹಾರಗಳನ್ನೇ ಸಮರ್ಥನೆಯಾಗಿ ಬಳಸುತ್ತಾರೆ. ಇಂತಹ ಸಮರ್ಥನೆಗಳನ್ನು ಯುಕೆ ಮತ್ತು ಯುರೋಪ್‌ನ ನಾಯಕರು ಒಪ್ಪಿದರೂ, ಮೀನುಗಾರರು ಮಾತ್ರ ಸಂಘಟಿತರಾಗಿ ಈ ಅಭಿಮತವನ್ನು ವಿರೋಧಿಸುತ್ತ ಬಂದಿ¨ªಾರೆ.
ಬ್ರೆಕ್ಸಿಟ್ ಆಯ್ಕೆ ತಮ್ಮೆದುರು ಬರುವ ಬಹಳ ಮೊದಲೇ ಮೀನುಗಾರರ ನಿಯೋಗ ಯುಕೆಯ ಪರಿಸರ ಇಲಾಖೆಯ ಮಂತ್ರಿಗಳ ಬಳಿ ಹೋಗಿ ಬ್ರಿಟನ್‌ನ ಸುತ್ತಲಿನ ಸಮುದ್ರ ತೀರವನ್ನು ಪೂರ್ಣವಾಗಿ ತಮ್ಮ ದೇಶದ ಮೀನುಗಾರಿಕೆಗೆ ಮಾತ್ರ ಸಲ್ಲಬೇಕು ಎಂದು ಬೇಡಿಕೆ ಇಟ್ಟಿತ್ತು. ಮೀನುಗಾರಿಕೆ ಯುಕೆಯ ಬೊಕ್ಕಸಕ್ಕೆ ಅಲಕ್ಷಿಸುವಷ್ಟು ಸಣ್ಣ ಆದಾಯವನ್ನು ತರುತ್ತದೆ; ಮೀನುಗಾರಿಕೆಗಿಂತ ಬಿಸ್ಕತ್ ತಯಾರಿಯ ಉತ್ಪಾದನೆಯಲ್ಲಿ ದೇಶದ ಜಿಡಿಪಿಗೆ ಹೆಚ್ಚು ಕೊಡುಗೆ ಇದೆ ಎಂದು ಪರಿಸರ ಮಂತ್ರಿಗಳು ಅಂದು ತಮಾಷೆ ಮಾಡಿದ್ದರಂತೆ ! ದಶಕಗಳ ತಮ್ಮ ಹತಾಶೆಯನ್ನು ಕೊನೆಗೊಳಿಸುವ ಅವಕಾಶವನ್ನು ಬ್ರೆಕ್ಸಿಟ್ ಆಯ್ಕೆ ಒದಗಿಸಿದಾಗ ಮೀನುಗಾರರ ಉದ್ಯಮ ಒಟ್ಟಾಗಿ ಯುರೋಪ್ ಒಕ್ಕೂಟದಿಂದ ಹೊರನಡೆಯುವ ಕಡೆಗೆ ಮತ ಹಾಕಿದರು. “ನಮ್ಮ ನೀರನ್ನು ನಾವೇ ನಿಯಂತ್ರಿಸುವ’ ಎಂದರು.
ಯುನೈಟೆಡ್ ಕಿಂಗ್‌ಡಮ್‌ನ ಮೀನುಗಾರರನ್ನು ಖುಷಿಪಡಿಸಬಲ್ಲ , ಆದರೆ ಇಲ್ಲಿನ ಅದೆಷ್ಟೋ ವ್ಯಾಪಾರಿಗಳನ್ನು, ಉದ್ಯಮಿಗಳನ್ನು ಚಿಂತೆಗೆ ಗುರಿಮಾಡಬಲ್ಲ ಬ್ರೆಕ್ಸಿಟ್ ಸದ್ಯಕ್ಕೆ ವಿಚ್ಛೇದನದ ಕರಾರುಗಳ ತೂಗುಯ್ನಾಲೆಯಲ್ಲಿ ಇದೆ. ವಿಚ್ಛೇದನದ ಶರತ್ತುಗಳು ಇನ್ನೆರಡು ವರ್ಷಗಳಲ್ಲಿ ತೀರ್ಮಾನವಾಗಿ ಹೊಸ ವ್ಯಾವಹಾರಿಕ ಸಂಬಂಧದ ರೀತಿ-ನೀತಿಗಳು ಬರೆಯಲ್ಪಡಬೇಕು ಎನ್ನುವ ಆಶಯ ಇದ್ದರೂ, ಅತ್ಯಂತ ಸಂಕೀರ್ಣವಾದ ಯುರೋಪಿ ಯನ್ ಒಕ್ಕೂಟ ವ್ಯವಸ್ಥೆಯ ಒಳಗೆ ಇದು ಕಾರ್ಯರೂಪಕ್ಕೆ ಬರುವ ಭರವಸೆ ಕಾಣಿಸುವುದಿಲ್ಲ. ದುಡ್ಡಿಗಾಗಿಯೇ ನಡೆಯುವ ವ್ಯವಹಾರಗಳ ಆಧಾರದÇÉೇ ಬೆಸೆಯುವ ಮತ್ತು ಮುರಿಯುವ ಸಂಬಂಧಗಳ ಈ ಯುಗದಲ್ಲಿ ಯುಕೆಯ ಮೀನುಗಾರರ ಭರವಸೆ ಕ್ಷೀಣವಾಗಿದೆ, ಆದರೆ ಹಾರೈಕೆ ಮಾತ್ರ ದೃಢವಾಗಿದೆ.
– ಯೋಗೀಂದ್ರ ಮರವಂತೆ ಬ್ರಿಸ್ಟಲ್, ಇಂಗ್ಲೆಂಡ್