Advertisement

ಜಂಕ್ ಫುಡ್ ಗುಲಾಮಗಿರಿಯಿಂದ ಹೊರಬನ್ನಿ: ಬಿ.ಸಿ.ಪಾಟೀಲ್

11:40 AM Jan 05, 2023 | Team Udayavani |

ಬೆಂಗಳೂರು: ಜನರು ‘ಜಂಕ್ ಫುಡ್ ಗುಲಾಮಗಿರಿ’ಯಿಂದ ಹೊರಬಂದು ಆರೋಗ್ಯಕರ ಆಹಾರ ಶೈಲಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

Advertisement

ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದ ಪೂರ್ವಭಾವಿ ಸಭಾ ಕಾರ್ಯಕ್ರಮವನ್ನು ಕೃಷಿ ಸಚಿವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

2023ರ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ಅದರನ್ವಯ ಪೂರ್ವಭಾವಿಯಾಗಿ ಸಭೆ ನಡೆಯುತ್ತಿದೆ. ಸಿರಿಧಾನ್ಯ ಬಳಕೆ ಮತ್ತು ಬೆಳೆಯುವಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ಕರ್ನಾಟಕ ‘ಸಿರಿಧಾನ್ಯಗಳ ರಾಜ’ ಎಂದು ಕರೆಯಲಾಗಿದೆ. ಮಸಾಲೆ ಉತ್ಪನ್ನಗಳು, ಸೌಂದರ್ಯವರ್ದಕ ಉತ್ಪನ್ನಗಳು, ಪರಿಸರ ಸ್ನೇಹಿ ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಸಹ ಸಾವಯವ ಸಿರಿಧಾನ್ಯದಿಂದ ತಯಾರಿಸಲಾಗುತ್ತಿದೆ. ಪೌಷ್ಠಿಕ ಆಹಾರದ ಬಗ್ಗೆ ಜನ ಹೆಚ್ಚು ಉತ್ಸುಕರಾಗುತ್ತಿದ್ದಾರೆ. ಜಂಕ್ ಫುಡ್‌ಗಳ ಗುಲಾಮರು ಜನರಾಗಿದ್ದು ಇದರಿಂದ ಆರೋಗ್ಯ ಹದಗೆಡುತ್ತಿದೆ. ಹೀಗಾಗಿ ಜನರು ಇತ್ತೀಚೆಗೆ ಸಾವಯವ ಸಿರಿಧಾನ್ಯಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಜನರು ಜಂಕ್ ಫುಡ್ ಮಾದರಿಯನ್ನು ಕೈಬಿಡಬೇಕು. ಉತ್ತಮ ಆರೋಗ್ಯಕ್ಕಾಗಿ ಸಾವಯವ ಸಿರಿಧಾನ್ಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next