Advertisement

ಕಾಲೇಜು ಮೈದಾನದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬ್ರೇಕ್‌

09:35 PM Oct 23, 2019 | Team Udayavani |

ಕೊಳ್ಳೇಗಾಲ: ಪಟ್ಟಣದ ಹೃದಯ ಭಾಗದಲ್ಲಿರುವ ಹೆಸರುವಾಸಿಯಾದ ಸರ್ಕಾರಿ ಎಂಜಿಎಸ್‌ವಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ವಿವಿಧ ಪ್ರಗತಿಪರ ಸಂಘಟನೆ ಅನೇಕ ಖಾಸಗಿ ಕಾರ್ಯಕ್ರಮಗಳ ಆಯೋಜನೆಯಿಂದಾಗಿ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕುಂಠಿತವಾಗುವ ಹಿನ್ನೆಲೆಯಲ್ಲಿ ಸರ್ಕಾರ ಕಾಲೇಜು ಮೈದಾನದಲ್ಲಿ ಯಾವುದೇ ತರಹದ ಖಾಸಗಿ ಕಾರ್ಯಕ್ರಮ ನಿರ್ಬಂಧ ಹೇರಿದ್ದು, ಎಲ್ಲಾ ಕಾರ್ಯಕ್ರಮಗಳಿಗೆ ಬ್ರೇಕ್‌ ಬಿದ್ದಿದೆ.

Advertisement

ಪಟ್ಟಣದ ಮುಡಿಗುಂಡ ಬಡಾವಣೆಯ ಮುಡಿಗುಂಡ ಸುಬ್ಬಪ್ಪ ವೀರಪ್ಪ ಗುರುಕಾರ್‌ರವರು ಸರ್ಕಾರಿ ಕಾಲೇಜು ತೆರೆಯಲು ಬೃಹತ್ತಾದ ಜಮೀನೊಂದನ್ನು ದಾನವಾಗಿ ಅಂದಿನ ತಮಿಳುನಾಡಿನ ಸರ್ಕಾರಕ್ಕೆ ನೀಡಿದ್ದರು. 1953ರಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗಿತ್ತು.

ಖಾಸಗಿ ಕಾರ್ಯಕ್ರಮಕ್ಕೆ ಬ್ರೇಕ್‌: ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾಲೇಜಿನ ಹೊರ ವಲಯದ ಮೈದಾನದಲ್ಲಿ ಯಾವುದೇ ಆಡಚಣೆಗಳಾಗದಂತೆ ನಿಶ್ಯಬ್ದವಾಗಿದ್ದ ವೇಳೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯಲ್ಲಿ ತೊಡಗಲು ಉತ್ಸಾಹ ಹೆಚ್ಚಾಗಿರುತ್ತದೆ.

ಇಂಥ ವೇಳೆ ಖಾಸಗಿ ವ್ಯಕ್ತಿಗಳು ಕಾಲೇಜು ಮೈದಾನದಲ್ಲಿ ವ್ಯಾಪಾರ ಮಳಿಗೆ, ವಸ್ತು ಪ್ರದರ್ಶನ ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಧ್ವನಿವರ್ಧಕ ಶಬ್ದದಿಂದ ವಿದ್ಯಾರ್ಥಿಗಳ ಗಮನ ಸಂಪೂರ್ಣ ಕಾರ್ಯಕ್ರಮದ ಮೇಲೆ ನಾಟುವುದ ಮನಗಂಡ ಸರ್ಕಾರ ಇಂಥ ಖಾಸಗಿ ಕಾರ್ಯಕ್ರಮಕ್ಕೆ ಮೈದಾನ ನಿರ್ಬಂಧ ಮಾಡುವುದರಿಂದ ಶೈಕ್ಷಣಿಕ ಪ್ರಗತಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಕಾರ್ಯಕ್ರಮಗಳಿಗೆ ಬ್ರೇಕ್‌ ವೊಡ್ಡಿದೆ.

ಸ್ವಚ್ಛತೆ ಮರೀಚಿಕೆ: ಇತ್ತೀಚಿನ ದಿನಗಳಲ್ಲಿ ಖಾಸಗಿ ಸಂಘ ಸಂಸ್ಥೆಯವರಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೆ ಮೈದಾನದ ಅವಕಾಶ ನೀಡುತ್ತಿದ್ದ ವೇಳೆ ಖಾಸಗಿ ವ್ಯಕ್ತಿಗಳು ಕಾರ್ಯಕ್ರಮ ನಡೆಸಿ, ಬಳಿಕ ಬಂದಿದ್ದ ಸಾರ್ವಜನಿಕರಿಗೆ ಊಟ, ಉಪಚಾರ ಮತ್ತು ಇನ್ನಿತರ ಲಘು ಉಪಾಹಾರಗಳನ್ನು ಸೇವನೆ ಮಾಡಿ ನಂತರ ಪೇಪರ್‌ ತಟ್ಟೆ ಇನ್ನಿತರ ಎಲೆಗಳನ್ನು ಮೈದಾನದಲ್ಲಿ ಬಿಸಾಡುವುದರಿಂದ ಮೈದಾನದಲ್ಲಿ ಸ್ವಚ್ಛತೆ ಮರೀಚಿಕೆಯಾಗಿತ್ತು.

Advertisement

ಕ್ಲಾಸ್‌ಗೆ ಚಕ್ಕರ್‌, ಕಾರ್ಯಕ್ರಮಕ್ಕೆ ಹಾಜರ್‌: ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಇನ್ನಿತರ ಕಾರ್ಯಕ್ರಮಗಳು ಆಯೋಜನೆ ಗೊಂಡ ವೇಳೆ ಕಾಲೇಜು ವಿದ್ಯಾರ್ಥಿಗಳು ಶೌಚಾಲಯಕ್ಕೆಂದು ತರಗತಿಯಿಂದ ಹೊರ ನಡೆದು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತರಗತಿಗೆ ಗೈರು ಆಗುವುದರಿಂದ ಶೈಕ್ಷಣಿಕ ಪ್ರಗತಿಗೆ ಮತ್ತಷ್ಟು ಕಂಠಕ ಏರ್ಪಡುತ್ತಿತ್ತು.

ಶೌಚಾಲಯ ಅಪೂರ್ಣ: ಸರ್ಕಾರ ಸುಮಾರು 17.90 ಲಕ್ಷ ರೂ. ಅಂದಾಜಿನಲ್ಲಿ ಶೌಚಾಲಯ ನಿರ್ಮಾಣ ಮಾಡಲು ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ವಿಭಾಗಕ್ಕೆ ಸೂಚನೆ ನೀಡಿತ್ತು. ಆದರೆ ಅಧಿಕಾರಿಗಳು ಕಾಮಗಾರಿಯನ್ನು ಅಪೂರ್ಣ ಮಾಡಿರುವುದರಿಂದ ಬಯಲು ಶೌಚಾಲಯಕ್ಕೆಂದು ಹೊರ ನಡೆಯುವ ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್‌ ಹಾಕುತ್ತಿರುವುದು ಪ್ರಾಂಶುಪಾಲರಿಗೆ ತಲೆನೋವಾಗಿ ಪರಿಣಮಿಸಿದೆ.

ಪಟ್ಟಣದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾಲೇಜು ಸ್ಥಳವನ್ನು ಲಪಟಾಯಿಸುವ ನೆಪದಲ್ಲಿ ತೊಡಗಿದ್ದ ವೇಳೆ ಸಂಬಂಧಪಟ್ಟ ಮೇಲಧಿಕಾರಿಗಳ ಗಮನ ಸೆಳೆದು ತೆರವು ಮಾಡುವ ಪ್ರಯತ್ನದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿ ಅವರಿಗೆ ಹಿನ್ನಡೆಯಾಗಿದೆ. ಅವರು ವಶಪಡಿಸಿಕೊಳ್ಳಲು ಯತ್ನಿಸಿದ ಸ್ಥಳ ಬಯಲಾಗಿ ರುವುದರಿಂದ ಕಾಲೇಜಿಗೆ ಏಕಾಏಕಿ ರಾಸುಗಳು, ನಾಯಿಗಳು ಮತ್ತು ಇನ್ನಿತರ ಸಾರ್ವಜನಿಕರು ನುಗ್ಗುವಂತಾಗಿದ್ದು, ಕೂಡಲೇ ಕ್ಷೇತ್ರದ ಶಾಸಕ ಎನ್‌.ಮಹೇಶ್‌ ಗಮನ ಸೆಳೆದು ತಂತಿ ಬೇಲಿ ಕಲ್ಪಿಸುವ ಮೂಲಕ ಕಾಲೇಜು ಮೈದಾನಕ್ಕೆ ಬರುವ ಅಡತಡೆಗಳಿಗೆ ನಿರ್ಬಂಧ ಹಾಕಲಾಗುವುದು.
-ಎಸ್‌.ಪ್ರಮೋದ್‌, ಪ್ರಾಂಶುಪಾಲ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next