Advertisement

ಅಪಸ್ಮಾರ: ಮೆದುಳಿನ ಕೋಶದಲ್ಲಿ ಅಪಸ್ವರ

08:09 PM Dec 30, 2020 | Team Udayavani |

ಚೆನ್ನಾಗಿಯೇ ಮಾತಾಡುತ್ತಾ ಕುಳಿತಿದ್ದು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬೀಳುವ ಜನರನ್ನುನಾವೆಲ್ಲಾ ನೋಡಿಯೇ ಇರುತ್ತೇವೆ. ಹೀಗೆ ದಿಢೀರ್‌ ಕಾಣಿಸಿಕೊಳ್ಳುವಕಾಯಿಲೆಯೇ ಮೂರ್ಛೆ ರೋಗ. ಮಿದುಳಿನ ಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಮೂರ್ಛೆ ರೋಗ ಜೊತೆಯಾಗುತ್ತದೆ. ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದು, ಪಥ್ಯ ಅನುಸರಿಸಿದರೆ ಮೂರ್ಛೆ ರೋಗದಿಂದಪಾರಾಗಬಹುದು.

Advertisement

ಈ ಕಾಯಿಲೆಯು ಯಾವಾಗಲಾದರೂ, ಯಾವ ವಯಸ್ಸಿನವರಲ್ಲಾದರೂ ಬರಬಹುದು. ದೇವರ ಶಾಪದಕಾರಣಕ್ಕೆ ಈ ಕಾಯಿಲೆ ಬಂದಿದೆ ಎಂದುನಂಬುವ ಕೆಲವರು, ಅದು ತಂತಾನೇಹೋಗಿಬಿಡುತ್ತದೆ ಎಂದೂ ವಾದಿಸುತ್ತ ಚಿಕಿತ್ಸೆಪಡೆಯುವುದೇ ಇಲ್ಲ. ಇದರಿಂದಕಾಯಿಲೆಯು ಉಲ್ಬಣಿಸಿ ಭವಿಷ್ಯದಲ್ಲಿಹೆಚ್ಚಿನ ತೊಂದರೆ ಜೊತೆಯಾಗುವ ಸಾಧ್ಯತೆ ಇದ್ದೇ ಇದೆ.

ಮೆದುಳಿಗೆ ಜ್ವರ ಬರುವ ಕಾರಣಕ್ಕೆ, ರಸ್ತೆಅಪಘಾತದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಕಾರಣಕ್ಕೆ, ಸೆರೆಬ್ರಲ್‌ ಪಾಲ್ಸಿಯ ಕಾರಣಕ್ಕೆಮತ್ತು ಅಪೌಷ್ಟಿದಾಯಕ ಆಹಾರಸೇವನೆಯ ಕಾರಣಕ್ಕೆ ಅಪಸ್ಮಾರಜೊತೆಯಾಗಬಹುದು. ಸೂಕ್ತ ಚಿಕಿತ್ಸೆಪಡೆದು ವೈದ್ಯರ ಸಲಹೆಯನ್ನುಕಡ್ಡಾಯವಾಗಿ ಪಾಲಿಸಿದರೆ 3ರಿಂದ 5ವರ್ಷದಲ್ಲಿ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.

ಮೂರ್ಛೆ ರೋಗದ ಸಮಸ್ಯೆ ಇರುವವರು :

  • ವಾಹನ ಚಾಲನೆ ಮಾಡಬಾರದು.
  • ಬೆಂಕಿ, ನೀರು, ಅತಿ ಎತ್ತರದ ಸ್ಥಳದಲ್ಲಿ ಕೆಲಸ ಮಾಡಲು ಹೋಗಬಾರದು.
  • ಹಣ್ಣು- ತರಕಾರಿಗಳನ್ನು ಉಪ್ಪಿನ ನೀರಿನಲ್ಲಿ ತೊಳೆದು ಸೇವಿಸಬೇಕು.
  • ಮಾಂಸಾಹಾರವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು.
  • ವೈದ್ಯರು ಹೇಳಿದ ಪಥ್ಯವನ್ನು ತಪ್ಪದೇ ಪಾಲಿಸಬೇಕು.

 

Advertisement

ಕಾರಣಗಳು :

  • ನಿದ್ದೆಯ ಅಭಾವ
  • ಮಾತ್ರೆ ಸೇವನೆಯನ್ನು ತಪ್ಪಿಸುವುದು.
  • ಅತಿಯಾದ ಒತ್ತಡದಲ್ಲಿ ಕೆಲಸ ಮಾಡುವುದು
  • ಮದ್ಯಪಾನ

 

-ಡಾ. ರೂಪಾ ಕೆ. ಜಿ. ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next