Advertisement

ಬ್ರಹ್ಮಾವರ: “ವಿ ದ‌‌ ಪೀಪಲ್ ಆಫ್ ಇಂಡಿಯ”ನಾಟಕ ಪ್ರದರ್ಶನ

02:33 PM Feb 27, 2022 | Team Udayavani |

ಬ್ರಹ್ಮಾವರ: “ಮಂದಾರ”(ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಹಾಗೂ ದಿಮ್ಸಾಲ್ ನಾಟಕ ಶಾಲೆ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಫೆ.26ರಂದು ಆಯೋಜನೆಗೊಂಡ ರಂಗಾಯಣ ಶಿವಮೊಗ್ಗ ಇವರ “ವಿ ದ‌‌ ಪೀಪಲ್ ಆಫ್ ಇಂಡಿಯ” ನಾಟಕವು ಎಸ್.ಎಮ್.ಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಪ್ರದರ್ಶನಗೊಂಡಿತು.

Advertisement

ಬ್ರಹ್ಮಾವರ ತಾಲೂಕಿನ ತಹಶೀಲ್ದಾರರಾದ‌ ರಾಜಶೇಖರ್ ಮೂರ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು “ಎರಡುವರೆ ಸಾವಿರ ವರ್ಷಗಳಿಂದ ನಾವು ಜಾತಿಗಳಾಗಿ, ಧರ್ಮಗಳಾಗಿ, ಭಾಷಾ ವ್ಯಕ್ತಿಗಳಾಗಿ, ಪ್ರಾದೇಶಿಕ ವ್ಯಕ್ತಿಗಳಾಗಿ ಬದುಕಿದ್ದೀವಿ ಇದೆಲ್ಲವನ್ನೂ ಮೀರಿ ‘ವಿ ದಿ ಪೀಪಲ್ ಆಪ್ ಇಂಡಿಯಾ’ ನಾವೆಲ್ಲರೂ ಭಾರತೀಯರು ಎಂಬ ತತ್ವದಡಿಯಲ್ಲಿ ಬದುಕುದನ್ನು ಕಲಿಯಬೇಕಿದೆ. ಹಾಗೆ ಬದುಕಲು ಕಲಿತ ದಿನ ಭಾರತ ಜಗತ್ತಿನಲ್ಲಿ ಸರ್ವಶ್ರೇಷ್ಟ ದೇಶವಾಗಿ ಹೊರಹೊಮ್ಮಲಿದೆ’ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಎಮ್.ಎಸ್ ಕಾಲೇಜಿನ ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಅವರು ನಾಟಕ ಪ್ರದರ್ಶನಕ್ಕೆ ಶುಭ ಹಾರೈಸಿದರು.

ದಿಮ್ಸಾಲ್ ನಾಟಕ ಶಾಲೆಯ ಮುಖ್ಯಸ್ಥರಾದ ಅಭಿಲಾಷಾ ಹಂದೆ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ಮಂದಾರ ತಂಡದ ಸದಸ್ಯರಿಂದ ರಂಗಗೀತೆಗಳನ್ನ ಹಾಡಲಾಯಿತು.ಬಳಿಕ ರಂಗಾಯಣ ಶಿವಮೊಗ್ಗ ಇವರಿಂದ “ವಿ ದ ಪೀಪಲ್ ಆಫ್ ಇಂಡಿಯ” ನಾಟಕ ಪ್ರದರ್ಶನಗೊಂಡಿತು.ಮಂದಾರದ ನಿರ್ದೇಶಕ ರೋಹಿತ್ ಎಸ್ ಬೈಕಾಡಿ ಕಾರ್ಯಕ್ರಮ ನಿರೂಪಿಸಿ,ಸಚಿನ್ ಅಂಕೋಲ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next