ಬ್ರಹ್ಮಾವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜ ಕತ್ವದಲ್ಲಿ ಅಜಪುರ ಯಕ್ಷಗಾನ ಸಂಘದಿಂದ ಜರಗಿದ ಎರಡು ತಿಂಗಳ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚಾವಡಿಯಲ್ಲಿ ನೆರವೇರಿತು.
ಸಂಘದ ಅಧ್ಯಕ್ಷ ಬಿರ್ತಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಐರೋಡಿ ರಾಜಶೇಖರ ಹೆಬ್ಟಾರ್ ಮಾತನಾಡಿ, ಹಂದಾಡಿ ಸುಬ್ಬಣ್ಣ ಭಟ್ಟರಿಂದ ಪ್ರಾರಂಭಗೊಂಡ ಅಜಪುರ ಯಕ್ಷಗಾನ ಸಂಘವು ಕಳೆದ ಎಪ್ಪತ್ತು ವರ್ಷಗಳಿಂದ ಯಕ್ಷಗಾನ ತರಬೇತಿಯಲ್ಲಿ, ಚಟುವಟಿಕೆಗಳಲ್ಲಿ ಮುಂದುವರಿಯುತ್ತಿರುವುದು ಶ್ಲಾಘ ನೀಯ ಎಂದರು.
ವೇದಿಕೆಯಲ್ಲಿ ಸಂಘದ ಗೌರವಾದ್ಯಕ್ಷ ಬಿ. ಕೃಷ್ಣಸ್ವಾಮಿ ಜೋಶಿ, ಉದ್ಯಮಿ ಸುಂಕೇರಿ ದಯಾನಂದ ನಾಯಕ್, ಉಪಾಧ್ಯಕ್ಷ ಎಂ. ಲಕ್ಷ್ಮಣ ಗಾಣಿಗ, ಯಕ್ಷಗಾನ ಚಿಂತಕ ಎಸ್. ವಿಠಲ ಶೆಟ್ಟಿ ಚಾಂತಾರು, ಮುಖ್ಯ ಶಿಕ್ಷಕ ಪ್ರತೀಶ್ ಕುಮಾರ್, ಸಹಶಿಕ್ಷಕ ಮಿಥುನ್ ನಾಯಕ್ ಉಪಸ್ಥಿತರಿದ್ದರು.
ಕೋಶಾಧಿಕಾರಿ ಗಣೇಶ್ ಬ್ರಹ್ಮಾವರ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಧರ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಕೃಷ್ಣಮೂರ್ತಿ ವಂದಿಸಿದರು.
ಶಿಬಿರದಲ್ಲಿ ತರಬೇತಿಗೊಂಡ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗದ ಪ್ರಾತ್ಯಕ್ಷಿಕೆ ನಡೆಯಿತು.