Advertisement

ಬ್ರಹ್ಮರಕೂಟ್ಲು ಟೋಲ್‌ ಪ್ಲಾಝಾ: 3ನೇ ಬೂತ್‌ ಕೊನೆಗೂ ಕಾರ್ಯಾರಂಭ

12:32 AM Apr 19, 2023 | Team Udayavani |

ಬಂಟ್ವಾಳ: ರಾ.ಹೆ.75ರ ಬಿ.ಸಿ.ರೋಡು ಬಳಿಯ ಬ್ರಹ್ಮರಕೂಟ್ಲು ಟೋಲ್‌ ಪ್ಲಾಝಾದಲ್ಲಿ ವಾಹನಗಳ ಸರತಿಯನ್ನು ತಪ್ಪಿಸುವ ದೃಷ್ಟಿಯಿಂದ ಅನುಷ್ಠಾನಗೊಂಡು ಹಲವು ಸಮಯ ಕಳೆದರೂ ಕಾರ್ಯಾರಂಭಗೊಳ್ಳದಿದ್ದ ಮೂರನೇ ಟೋಲ್‌ ಬೂತ್‌ ಕೊನೆಗೂ ಕಾರ್ಯಾರಂಭಿಸಿದೆ.

Advertisement

ಬ್ರಹ್ಮರಕೂಟ್ಲು ಟೋಲ್‌ ಪ್ಲಾÉಝಾ ಅನುಷ್ಠಾನಗೊಂಡ ಬಳಿಕ ಬರೀ ಎರಡೇ ಟೋಲ್‌ ಬೂತ್‌ಗಳು ಕಾರ್ಯಾಚರಿಸುತ್ತಿದ್ದು, ಇದರಿಂದ ವಾಹನಗಳು ಬಹಳ ಹೊತ್ತು ಸರತಿಯಲ್ಲಿ ನಿಂತು ಹೋಗಬೇಕಾದ ಸ್ಥಿತಿ ಉಂಟಾಗಿತ್ತು. ಹೀಗಾಗಿ 3ನೇ ಬೂತ್‌ ಬೂತ್‌ ಅನುಷ್ಠಾನದ ಬೇಡಿಕೆ ಕಳೆದ ಹಲವು ವರ್ಷಗಳ ಹಿಂದೆಯೇ ಕೇಳಿಬಂದಿತ್ತು.

ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೂರ್‍ನಾಲ್ಕು ವರ್ಷಗಳ ಮುಂಚೆಯೇ 3ನೇ ಟೋಲ್‌ ಅನುಷ್ಠಾನಕ್ಕೆ ಹೆದ್ದಾರಿ ವಿಸ್ತರಣೆ ಕಾಮಗಾರಿ ಆರಂಭಗೊಂಡು ಬಳಿಕ ವಿದ್ಯುತ್‌ ಕಂಬಗಳು ಸ್ಥಳಾಂತರಗೊಂಡಿಲ್ಲ ಎಂಬ ಕಾರಣಕ್ಕೆ ಅರ್ಧಕ್ಕೆ ನಿಂತಿತ್ತು. ಮುಂದೆ ಕಂಬಗಳು ಸ್ಥಳಾಂತರಗೊಂಡು ಹೆದ್ದಾರಿ ವಿಸ್ತರಣೆಯಾದರೂ ಬೂತ್‌ ಅಳವಡಿಕೆ ಸೇರಿದಂತೆ ಅದರ ಕಾಮಗಾರಿಗಳು ಪೂರ್ಣಗೊಳ್ಳುವುದಕ್ಕೆ ಇನ್ನೂ ಹಲವು ಸಮಯ ಕಾಯಬೇಕಾಯಿತು.

ಬರೋಬ್ಬರಿ 3 ವರ್ಷ ತೆಗೆದುಕೊಂಡ ಕಾಮಗಾರಿ ಕಳೆದ ವರ್ಷ ಪೂರ್ಣಗೊಂಡಿದರೂ ಎನ್‌ಎಚ್‌ಎಐ ಮೂರನೇ ಬೂತನ್ನು ಕಾರ್ಯಾರಂಭ ಮಾಡಿರಲಿಲ್ಲ. ಆದರೆ ಪ್ರಸ್ತುತ ಕಳೆದ ಕೆಲವು ದಿನಗಳಿಂದ ಮೂರನೇ ಬೂತ್‌ ಕಾರ್ಯಾಚರಿಸುತ್ತಿದೆ. ಇದರಿಂದ ವಾಹನಗಳು ವೇಗವಾಗಿ ಸಾಗುವುದಕ್ಕೆ ಅನುಕೂಲವಾಗಿದೆ. ಜತೆಗೆ ಪಾಸ್‌ಟ್ಯಾಗ್‌ ಕೂಡ ಅನುಷ್ಠಾನಗೊಂಡಿರುವುದರಿಂದ ಹೆಚ್ಚು ಸಮಯ ಕಾಯಬೇಕಾದ ಸ್ಥಿತಿ ಇಲ್ಲ ಎಂದು ಟೋಲ್‌ ಸಿಬಂದಿ ಹೇಳುತ್ತಾರೆ.

ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ
ಹಿಂದೆ ಮೂರನೇ ಬೂತ್‌ ಅನುಷ್ಠಾನಗೊಳ್ಳುವ ಮುನ್ನ ಬೆಳಗ್ಗಿನ ಹೊತ್ತು ಬಿ.ಸಿ.ರೋಡು ಭಾಗದಿಂದ ಮಂಗಳೂರು ಕಡೆಗೆ ತೆರಳುವ ವಾಹನಗಳು ಸರದಿಯಲ್ಲಿ ನಿಲ್ಲಬೇಕಿತ್ತು. ಜತೆಗೆ ಇಲ್ಲಿನ ಬ್ರಹ್ಮಸನ್ನಿಧಿಯ ಬಳಿ ಹೆದ್ದಾರಿ ಕಿರಿದಾಗಿರುವುದರಿಂದ ವಾಹನಗಳ ಸಾಲು ಅಲ್ಲಿಗೆ ತಲುಪಿದರೆ ಟ್ರಾಫಿಕ್‌ ಜಾಮ್‌ನ ತೊಂದರೆಯೂ ಉಂಟಾಗುತ್ತಿತ್ತು. ಸಂಜೆ ಹೊತ್ತು ಮಂಗಳೂರು ಭಾಗದಿಂದ ಬಿ.ಸಿ.ರೋಡಿಗೆ ಆಗಮಿಸುವ ಹೆದ್ದಾರಿಯಲ್ಲಿ ವಾಹನಗಳು ಸರತಿಯಲ್ಲಿ ನಿಲ್ಲುವ ಸ್ಥಿತಿ ಇತ್ತು.

Advertisement

“ಉದಯವಾಣಿ’ ಬೆಳಕು ಚೆಲ್ಲಿತ್ತು
ಬ್ರಹ್ಮರಕೂಟ್ಲು ಟೋಲ್‌ನ 3ನೇ ಬೂತ್‌ ಕಾಮಗಾರಿ ಪೂರ್ಣಗೊಳ್ಳದೇ ಇರುವ ಕುರಿತು ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ಕಾರ್ಯಾರಂಭಗೊಳ್ಳದೇ ಇರುವ ಕುರಿತು “ಉದಯವಾಣಿ’ಯು ಸಾಕಷ್ಟು ಬಾರಿ ವರದಿಗಳ ಕುರಿತು ಸಂಬಂಧಪಟ್ಟ ಎನ್‌ಎಚ್‌ಎಐನ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡಿತ್ತು. ಜತೆಗೆ ಎನ್‌ಎಚ್‌ಎಐ ಯೋಜನಾ ನಿರ್ದೇಶಕರು ಬದಲಾದ ಸಂದರ್ಭದಲ್ಲಿ ಹೊಸ ಪಿಡಿ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ವಿವರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next