Advertisement
ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ಪುತ್ತೂರಿಗೆ ಭೇಟಿ ಕೊಟ್ಟಿದ್ದರು. ನೇರವಾಗಿ ರಾಗಿದಕುಮೇರಿ ಕಾಲನಿಗೆ ಭೇಟಿ ನೀಡಿ, ಜತೆಗಿದ್ದ ಶಿವರಾಮ ಕಾರಂತ, ಕಾರ್ನಾಡು ಸದಾಶಿವ ರಾಯರನ್ನು ತರಾಟೆಗೆ ಎತ್ತಿಕೊಂಡಿದ್ದರು. ಕಾಲನಿ ವಾಸಿಗಳನ್ನು ಉಪೇಕ್ಷಿಸಲಾಗಿದೆ ಎಂಬುದೇ ಅವರ ಕೋಪಕ್ಕೆ ಕಾರಣವಾಗಿತ್ತು. ಅಲ್ಲಿನ ಜನರು ತೋಡಿನಲ್ಲಿ ಹರಿದು ಹೋಗುತ್ತಿದ್ದ ನೀರನ್ನೇ ಕುಡಿಯಲು ಬಳಸಿಕೊಳ್ಳುತ್ತಿದ್ದರು. ಇದನ್ನು ಕಂಡು ಕನಿಕರ ಪಟ್ಟು, ರಾಗಿದಕುಮೇರಿ ಬಳಿ ಬಾವಿ ತೋಡಲು ಸೂಚನೆ ನೀಡಿದ್ದರು. ಬಳಿಕ ಪುತ್ತೂರು ಪೇಟೆಗೆ ಆಗಮಿಸಿ, ಅಶ್ವತ್ಥ ಕಟ್ಟೆಯ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಇದೇ ಅಶ್ವತ್ಥಕಟ್ಟೆಯ ಹಿಂಬದಿ ಬ್ರಹ್ಮನಗರ ಕಾಲನಿ ಇದೆ. ಆಗಿನ ಸ್ಥಿತಿ ಬಿಡಿ, ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ ಎನ್ನುವುದು ವಾಸ್ತವ.
ತಾಲೂಕಿನಾದ್ಯಂತ ಈ ವರ್ಷ ಡೆಂಗ್ಯೂ ಸೇರಿದಂತೆ ಜ್ವರ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಜೋರಾಗಿ ಮಳೆ ಸುರಿಯುತ್ತಿದ್ದಂತೆ ಜ್ವರ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ಈ ಮಾತು, ಬ್ರಹ್ಮನಗರ ಕಾಲನಿಗೆ ಅನ್ವಯಿಸುವುದಿಲ್ಲ. ಈಗಲೂ ಜ್ವರ ಪ್ರಕರಣಗಳು ಕಂಡುಬರುತ್ತಿವೆ. ಕಾಲನಿಯಲ್ಲಿ ಒಟ್ಟು 45ರಿಂದ 50ರಷ್ಟು ಮನೆಗಳಿವೆ. 250ರಷ್ಟು ಜನರು ವಾಸಿಸುತ್ತಿದ್ದಾರೆ. ಇದರಲ್ಲಿ 25ಕ್ಕೂ ಅಧಿಕ ಮಂದಿ ಜ್ವರದಿಂದ ಹಾಸಿಗೆ ಹಿಡಿದಿದ್ದಾರೆ. ಸ್ಥಳೀಯರೊಬ್ಬರು ನೀಡಿದ ಮಾಹಿತಿಯಂತೆ- ವಿಜಯ್, ಜಗದೀಶ್, ಪುಷ್ಪಾ, ಸೌಮ್ಯಾ, ಪುನೀತ್, ನಿತೇಶ್, ಯೋಗೀಶ್, ಸಂಪತ್, ಚಂದು, ಯಶೋದಾ, ಚಂದ್ರ ಬಿ., ಪೊನ್ನಮ್ಮ ಮೊದಲಾದವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಾಮನ, ಚಂದ್ರ, ಹರ್ಷಿತ್, ಮನೋಹರ, ಪ್ರಕಾಶ, ಸುಧಾಕರ ಮೊದಲಾದವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರಲ್ಲಿ ಕೆಲವರು ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
Related Articles
ಶನಿವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿ ಆಗಮಿಸಿ, ರಕ್ತದ ಮಾದರಿ ಪಡೆದುಕೊಂಡಿದ್ದಾರೆ. ಸೋಮವಾರ ಮತ್ತೆ ಬರುತ್ತೇವೆ ಎಂದು ಹೇಳಿದ್ದರು. ಆದರೆ ಸೋಮವಾರ ಬಿಡಿ ಮಂಗಳ ವಾರವೂ ಬರಲಿಲ್ಲ. ಫಾಗಿಂಗ್ ಮಾಡಿಯೇ ಇಲ್ಲ. ಈ ಕಾಲನಿಯಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕೆಲಸ ಆಗಬೇಕಿದೆ.
Advertisement
ಮಲೇರಿಯಾಹಿಂದಿನ ವರ್ಷ ಬ್ರಹ್ಮನಗರ ಕಾಲನಿಯನ್ನು ಮಲೇರಿಯಾ ಜ್ವರ ಆವರಿಸಿಕೊಂಡಿತ್ತು. ಹಲವು ಮಂದಿ ಮಲೇರಿಯಾ ಜ್ವರದಿಂದ ಬಳಲುತ್ತಿದ್ದರು ಎನ್ನುವುದನ್ನು ಕಾಲನಿ ನಿವಾಸಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಡೆಂಗ್ಯೂ ಜ್ವರ ಆವರಿಸಿಕೊಂಡಿದೆ. ಸ್ವಚ್ಛತೆಗೆ ಗಮನ
ಬ್ರಹ್ಮನಗರ ಕಾಲನಿಯಲ್ಲಿ ಜ್ವರ ಪ್ರಕರಣ ಇದೆ ಎಂಬ ಮಾಹಿತಿ ಬಂದಿದೆ. ಡೆಂಗ್ಯೂ ಪ್ರಕರಣ ಕಡಿಮೆ ಆಗಿದೆ. ಇದೀಗವಷ್ಟೇ ಮಾಹಿತಿ ಬಂದಿದ್ದು, ಫಾಗಿಂಗ್ ನಡೆಸಲಾಗುವುದು. ಇಲ್ಲಿನ ಪರಿಸರವನ್ನು ಸ್ವತ್ಛವಾಗಿ ಇಟ್ಟುಕೊಳ್ಳಬೇಕು. ನಗರಸಭೆ ಇದರ ಬಗ್ಗೆ ಗಮನ ಹರಿಸಬೇಕಾಗಿದ್ದು, ಅವರ ಗಮನಕ್ಕೆ ತರಲಾಗುವುದು.
-ಡಾ| ಅಶೋಕ್ ಕುಮಾರ್ ರೈ, ತಾಲೂಕು ಆರೋಗ್ಯಾಧಿಕಾರಿ ಹಲವರಿಗೆ ಜ್ವರ
ಐದು ದಿನಗಳಿಂದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಡೆಂಗ್ಯೂ ಜ್ವರ ಎಂದು ವೈದ್ಯರು ತಿಳಿಸಿದ್ದಾರೆ. ರಕ್ತದ ಕಣ ಕಡಿಮೆ ಆಗಿದೆ. ಈಗಷ್ಟೇ ಆಸ್ಪತ್ರೆಯಿಂದ ಆಗಮಿಸಿದ್ದೇನೆ. ಮತ್ತೆ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯಬೇಕಿದೆ. ಕಾಲನಿಯ ಹಲವು ಮಂದಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ.
– ರಮೇಶ್,
ಬ್ರಹ್ಮನಗರ ಕಾಲನಿ ನಿವಾಸಿ ಗಣೇಶ್ ಎನ್. ಕಲ್ಲರ್ಪೆ