Advertisement
ಭಾರತಕ್ಕೆ ಹೋಲಿಸಿದರೆ ವೆಸ್ಟ್ ಇಂಡೀಸೇ ವಾಸಿ. ಅದು ಇಲ್ಲಿ 4 ಏಕದಿನ ಪಂದ್ಯಗಳನ್ನಾಡಿದೆ. ಒಂದರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಭಾರತ-ವೆಸ್ಟ್ ಇಂಡೀಸ್ ಇಲ್ಲಿ ಮುಖಾ ಮುಖೀಯಾಗುತ್ತಿರುವುದು ಇದೇ ಮೊದಲು.1995ರಲ್ಲಿ ಭಾರತ ತನ್ನ ಏಕೈಕ ಪಂದ್ಯವನ್ನು ಈ ಅಂಗಳದಲ್ಲಿ ಆಡಿತ್ತು. ಎದುರಾಳಿ ನ್ಯೂಜಿಲ್ಯಾಂಡ್. ಅದು ಸರಣಿಯ 6ನೇ ಹಾಗೂ ಅಂತಿಮ ಪಂದ್ಯವಾಗಿತ್ತು. ಮೊಹಮ್ಮದ್ ಅಜರುದ್ದೀನ್ ಮತ್ತು ಲೀ ಜರ್ಮನ್ ಇತ್ತಂಡಗಳ ನಾಯಕರಾಗಿದ್ದರು. ಸಣ್ಣ ಮೊತ್ತದ ಈ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಜಯಿಸಿತ್ತು.
Related Articles
2006ರ ಬಳಿಕ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ವಹಿಸುವ ಖುಷಿಯಲ್ಲಿರುವ ಮುಂಬಯಿಯ “ಬ್ರೆಬೋರ್ನ್ ಸ್ಟೇಡಿಯಂ’ ಇದನ್ನು ವಿಶೇಷ ರೀತಿಯಲ್ಲಿ ಆಚರಿಸಲಿದೆ. ಐತಿಹಾಸಿಕ ಲಾರ್ಡ್ಸ್ ಹಾಗೂ ಕೋಲ್ಕತಾದ ಈಡನ್ ಗಾರ್ಡನ್ಸ್‌ನಂತೆ ಅಂತಾರಾಷ್ಟ್ರೀಯ ಪಂದ್ಯದ ಆರಂಭಕ್ಕೂ ಮುನ್ನ ಗಂಟೆ ಬಾರಿಸುವ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ.
Advertisement
ಮೊದಲ ಅವಕಾಶ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಮುಂಬೈಕರ್ ಸಚಿನ್ ತೆಂಡುಲ್ಕರ್ ಅವರಿಗೆ ಲಭಿಸಿದೆ. ಮಧ್ಯಾಹ್ನ 1.25ಕ್ಕೆ ಇವರು ಗಂಟೆ ಬಾರಿಸುವ ಮೂಲಕ ಭಾರತ-ವೆಸ್ಟ್ ಇಂಡೀಸ್ ನಡುವಿನ 4ನೇ ಏಕದಿನ ಪಂದ್ಯದ ಆರಂಭವನ್ನು ಸಾರಲಿದ್ದಾರೆ. ಇದಕ್ಕೂ ಮುನ್ನ ತೆಂಡುಲ್ಕರ್ ಇದೇ ವರ್ಷದ ಭಾರತ-ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನ ಗಂಟೆ ಬಾರಿಸಬೇಕಿತ್ತು. ಆದರೆ ಭಾರೀ ಮಳೆಯಿಂದ ಈ ಅವಕಾಶ ಅವರಿಗೆ ತಪ್ಪಿಹೋಗಿತ್ತು.