Advertisement
ಏನಿದು ಅಂಬೇಡ್ಕರ್ ಸರ್ಕ್ಯೂಟ್?ಇದು ಈಗಿನ ಐಡಿಯಾವೇನಲ್ಲ. 2016 ರಲ್ಲೇ ಕೇಂದ್ರ ಸರಕಾರ ಅಂಬೇಡ್ಕರ್ ಸರ್ಕ್ಯೂಟ್ ಹೆಸರಿನಲ್ಲಿ, ಅವರು ಹುಟ್ಟಿದಾಗಿನಿಂದ ನಿರ್ವಾಣವಾಗುವವರೆಗೆ ಬದುಕು ಸಾಗಿಸಿದ್ದ ಸ್ಥಳಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿತ್ತು. ಅಂದರೆ
1. ಅಂಬೇಡ್ಕರ್ ಹುಟ್ಟೂರು – ಮಧ್ಯ ಪ್ರದೇಶದ ಮಾಹೋ – ಜನ್ಮಭೂಮಿ
2. ಬೌದ್ಧ ಧರ್ಮ ಸ್ವೀಕಾರ – ಮಹಾರಾಷ್ಟ್ರದ ನಾಗಪುರ – ದೀಕ್ಷಾಭೂಮಿ
3. ಮೃತಪಟ್ಟ ಸ್ಥಳ – ದಿಲ್ಲಿ – ಮಹಾಪರಿನಿರ್ವಾಣ ಭೂಮಿ
4. ಅಂತ್ಯಕ್ರಿಯೆ ನಡೆದ ಸ್ಥಳ – ಮಹಾರಾಷ್ಟ್ರದ ಮುಂಬಯಿ – ಚೈತ್ಯ ಭೂಮಿ
ಈ ರೀತಿಯಾಗಿ ವಿವಿಧ ಸ್ಥಳಗಳನ್ನು ಗುರುತಿಸಿ, ಇಲ್ಲಿಗೆ ಪ್ರವಾಸ ಕರೆದೊಯ್ಯುವ ಯೋಜನೆ ಹಾಕಿಕೊಳ್ಳಲಾಗಿದೆ. ಮೊದಲು ಶಿಕ್ಷಾಭೂಮಿಯಾಗಿ ಲಂಡನ್ ಬಳಸಿಕೊಳ್ಳಲಾಗಿತ್ತಾದರೂ ಈಗ ಸೇರಿಸಿಲ್ಲ.
ಒಟ್ಟು 17 ದಿನಗಳ ಕಾಲ ಈ ಪ್ರವಾಸ ನಡೆಯಲಿದೆ. ಪ್ರತಿಯೊಬ್ಬರಿಗೆ 62 ಸಾವಿರ ರೂ.ಗಳಾಗಲಿವೆ. 500 ಮಂದಿ ಯನ್ನು ಪ್ರವಾಸಕ್ಕೆಂದು ವಿಶೇಷ ರೈಲಿನಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಉದ್ದೇಶವೇನು?
ಸದ್ಯ ದೇಶದ ದಲಿತ ಸಮುದಾಯದ ಜನ ದೇಶದಲ್ಲಿರುವ ಈ ಎಲ್ಲ ಸ್ಥಳಗಳನ್ನು ಪುಣ್ಯಸ್ಥಳವೆಂದೇ ಪರಿಗಣಿಸಿ ಭೇಟಿ ನೀಡುತ್ತಾರೆ. ಆದರೆ ದಲಿತ ಸಮುದಾಯವನ್ನು ಮೀರಿ, ಉಳಿದವರನ್ನೂ ಈ ಸ್ಥಳಗಳಿಗೆ ಆಕರ್ಷಿಸುವುದು ಸರಕಾರದ ಪ್ರಮುಖ ಉದ್ದೇಶ. ಅಲ್ಲದೆ 2014ರಲ್ಲಿ ಮೋದಿ ಸರಕಾರ ಬಂದ ಮೇಲೆ ಅಂಬೇಡ್ಕರ್ ಅವರ ಕುರಿತಂತೆ ನಾನಾ ವಿಧವಾಗಿ ಸಂಭ್ರಮಿಸಲಾಗುತ್ತಿದೆ. ಅಲ್ಲದೆ ಮೋದಿ ಅವರು ಅಂಬೇಡ್ಕರ್ ಅವರ ದೂರದೃಷ್ಟಿಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ.