Advertisement
ಮಂಗಳವಾರದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 18.2 ಓವರ್‌ಗಳಲ್ಲಿ 84ಕ್ಕೆ ಕುಸಿಯಿತು. ಹರಿಣಗಳ ಪಡೆ 13.3 ಓವರ್‌ಗಳಲ್ಲಿ 4 ವಿಕೆಟಿಗೆ 86 ರನ್ ಮಾಡಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿತು. ಇದು ಹರಿಣಗಳ ಪಡೆಗೆ ಕಳೆದ 11 ಟಿ20 ಪಂದ್ಯಗಳಲ್ಲಿ ಒಲಿದ 10ನೇ ಜಯ. ಹಾಗೆಯೇ ಇದು ಬಾಂಗ್ಲಾಕ್ಕೆ ಎದುರಾದ ಸತತ 4ನೇ ಸೋಲು. ಅದು ಈಗಾಗಲೇ ಕೂಟದಿಂದ ಹೊರಬಿದ್ದಿದೆ.ಬಾಂಗ್ಲಾದ ಅಗ್ರ ಕ್ರಮಾಂಕದ ಮೇಲೆ ಘಾತಕ ಪ್ರಹಾರವಿಕ್ಕಿದ ರಬಾಡ 20 ರನ್ನಿಗೆ 3 ವಿಕೆಟ್ ಉರುಳಿಸಿದರು. ಇವರ ಎಸೆತಗಳಿಗೆ ಜವಾಬು ನೀಡಲು ವಿಫಲರಾದ ಸೌಮ್ಯ ಸರ್ಕಾರ್ ಮತ್ತು ರಹೀಂಗೆ ಖಾತೆ ತೆರೆಯಲಾಗಲಿಲ್ಲ. ಆರಂಭಕಾರ ನೈಮ್ (8) ಇವರ ಮತ್ತೊಂದು ವಿಕೆಟ್. ಈ ಸಾಧನೆಗಾಗಿ ರಬಾಡ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ನೋರ್ಜೆ ಸಾಧನೆ 8ಕ್ಕೆ 3.
Related Articles
ಪಂದ್ಯಶ್ರೇಷ್ಠ: ಕಾಗಿಸೊ ರಬಾಡ.
Advertisement