Advertisement
ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಜಸ್‌ಪ್ರೀತ್ ಬುಮ್ರಾ, ನುವನ್ ತುಷಾರ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಮೋಘ ದಾಳಿಗೆ ಕುಸಿದ ಕೋಲ್ಕತಾ ನೈಟ್‌ರೈಡರ್ ತಂಡವು 169 ರನ್ನಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಮುಂಬೈ 18.5 ಓವರ್ ಗಳಲ್ಲಿ 145 ಕ್ಕೆ ಆಲೌಟಾಯಿತು. ಸೂರ್ಯಕುಮಾರ್ ಯಾದವ್ 56, ಟಿಮ್ ಡೇವಿಡ್ 24 ಹೊರತು ಪಡಿಸಿ ಉಳಿದೆಲ್ಲಾ ಆಟಗಾರರು ಕೆಕೆಆರ್ ಬಿಗಿ ದಾಳಿಗೆ ನಲುಗಿ ಪೆವಿಲಿಯನ್ ಪರೇಡ್ ನಡೆಸಿದರು. ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರೆ, ಸುನಿಲ್ ನಾರಾಯಣ್, ವರುಣ್ ಚಕ್ರವರ್ತಿ , ರಸೆಲ್ ತಲಾ 2 ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಈ ಪಂದ್ಯದಲ್ಲಿ ಕೋಲ್ಕತಾ ಆರಂಭದಲ್ಲಿಯೇ ಎಡವಿತು. ಬಿರುಸಿನ ಆರಂಭ ಇಲ್ಲಿ ಕಾಣಲಿಲ್ಲ. ಫಿಲ್ ಸಾಲ್ಟ್, ಸುನೀಲ್ ನಾರಾಯಣ್, ಶ್ರೇಯಸ್ ಅಯ್ಯರ್ ಬೇಗನೇ ಔಟಾದ ಕಾರಣ ತಂಡ ಒತ್ತಡಕ್ಕೆ ಸಿಲಕಿತ್ತು. 57 ರನ್ನಿಗೆ 5 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ತಂಡವನ್ನು ವೆಂಕಟೇಶ್ ಅಯ್ಯರ್ ಆಧರಿಸಿದರು. ಇದರಿಂದ ತಂಡ ಚೇತರಿಸಿಕೊಂಡಿತು. ಕೊನೆ ಹಂತದಲ್ಲಿ ಮತ್ತೆ ಕುಸಿತ ಕಂಡಿದ್ದರಿಂದ ತಂಡದ ಮೊತ್ತ 169 ರನ್ನಿಗೆ ಸೀಮಿತಗೊಂಡಿತು.
Related Articles
Advertisement
ಮುಂಬೈ 1 ಬದಲಾವಣೆಈ ಪಂದ್ಯಕ್ಕಾಗಿ ಮುಂಬೈ ತಂಡ ಒಂದು ಬದಲಾವಣೆ ಮಾಡಿಕೊಂಡಿದೆ. ಮೊಹಮ್ಮದ್ ನಬಿ ಅವರ ಬದಲು ನಮನ್ ಧಿರ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿತು. ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಜಸ್‌ಪ್ರೀತ್ ಬುಮ್ರಾ ಅವರಿಗೆ ವಾಂಖೇಡೆಯಲ್ಲಿ 51 ವಿಕೆಟ್
ವಾಂಖೇಡೆಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಮೆರೆದಾಡಿದರು. ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ ಕೇವಲ 18 ರನ್ ನೀಡಿ 3 ವಿಕೆಟ್ ಪಡೆದ ಅವರು, ಮತ್ತೆ ಪರ್ಪಲ್ ಕ್ಯಾಪ್ ಮೇಲೆ ಹಕ್ಕು ಚಲಾಯಿಸಿದರು. ಈ ಬಾರಿ ಅವರ ಒಟ್ಟು ವಿಕೆಟ್‌ಗಳ ಸಂಖ್ಯೆ 17ಕ್ಕೇರಿದೆ. ಹಾಗೆಯೇ ವಾಂಖೇಡೆ ಮೈದಾನದಲ್ಲಿ ಅವರು ಪಡೆದ ವಿಕೆಟ್‌ಗಳ ಸಂಖ್ಯೆ 51ಕ್ಕೇರಿದೆ. ಐಪಿಎಲ್ ತಾಣವೊಂದರಲ್ಲಿ ಬೌಲರ್ ಒಬ್ಬರು ಪಡೆದ 5ನೇ ಗರಿಷ್ಠ ವಿಕೆಟ್ ಸಂಖ್ಯೆಯಿದು. ಸುನೀಲ್ ನಾರಾಯಣ್ ಕೋಲ್ಕತಾದಲ್ಲಿ 69 ವಿಕೆಟ್ ಪಡೆದಿರುವುದು ದಾಖಲೆಯಾಗಿದೆ. ರೋಹಿತ್ ಶರ್ಮ ಇಂಪ್ಯಾಕ್ಟ್: ಶುಕ್ರವಾರದ ಪಂದ್ಯದಲ್ಲಿ ರೋಹಿತ್ ಶರ್ಮ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲಾಯಿತು. ಮುಂಬೈ ಬೌಲಿಂಗ್ ವೇಳೆ ರೋಹಿತ್ ಕಣಕ್ಕಿಳಿಯಲಿಲ್ಲ.