ಬನ್ನೂರು: ಬೋವಿ ಸಮಾಜ ತಮ್ಮ ಶ್ರಮದ ನಿತ್ಯ ದುಡಿಮೆಯಿಂದಲೇ ಜೀವನವನ್ನು ನಡೆಸುತ್ತಿದ್ದು, ಆ ಮೂಲಕ ಬದುಕನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ವಿವೇಕಾನಂದ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಎಂ. ಪ್ರಕಾಶ್ ತಿಳಿಸಿದರು. ಪಟ್ಟಣ ಸಮೀಪದ ಸಂತೇಮಾಳದ ಬೋವಿ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾದ ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರಮದಿಂದಲೇ ಜೀವನ ನಡೆಸಲು ಸಾಧ್ಯ. ಶ್ರಮದಿಂದಲೇ ಮಕ್ಕಳನ್ನು ಬೆಳೆಸಲು ಆಗುತ್ತದೆ. ಆದರೆ ಶ್ರಮದ ಮಿತಿ ಬಹಳ ಕಡಿಮೆ ಇದೆ ಎಂದ ಅವರು, ದುಡ್ಡು ಕೊಟ್ಟರೆ ಅವನ ಶ್ರಮ ಕಡಿಮೆಯಾಗುತ್ತದೆ. ಆದರೆ ಒಬ್ಬನಿಗೆ ವಿದ್ಯೆಯನ್ನು ಕೊಟ್ಟರೆ ಅದು ತಲ ತಲಾಂತರ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.
ಯಾರನ್ನೂ ದೊಡ್ಡ ವ್ಯಕ್ತಿ ಎಂದು ಕರೆಯಬಹುದೆನ್ನುವುಕ್ಕೆ ಡಿ.ವಿ.ಗುಂಡಪ್ಪನವರ ನಿದರ್ಶನವನ್ನು ನೀಡಿ, ಯಾರೂ ಸಮಾಜದ ಒಳಿತನ್ನು ಬಯಸಿ, ಸಮಾಜದ ಅಭಿವೃದ್ಧಿಗೆ ದುಡಿಯುತ್ತಾರೋ ಆತನನ್ನು ದೊಡ್ಡ ವ್ಯಕ್ತಿ ಎಂದು ಕರೆಯಲು ಸಾಧ್ಯ ಎಂದರು. ಬೋವಿ ಸಮಾಜದ ಮುಖಂಡ ಮಹೇಶ್ ಕುಮಾರ್, ಕನ್ನಡ ನೆಲ, ಭಾಷೆಗೆ ತೊಂದರೆಯಾದರೆ ಖಂಡಿಸದೇ ಇರಬಾರದು. ಎಲ್ಲರೂ ಕನ್ನಡವನ್ನು ಹೆಚ್ಚಾಗಿ ಪ್ರೀತಿಸಿ ಕನ್ನಡವನ್ನು ಉಳಿಸಿ, ಬೆಳೆಸಲು ಪ್ರಯತ್ನಿಸಬೇಕೆಂದರು.
ಬೋವಿ ಸಮಾಜದ ಮುಖಂಡ ಮಹೇಶ್ ಕುಮಾರ್, ಗೆಳೆಯರ ಬಳಗದ ಅಧ್ಯಕ್ಷ ಚೆಲುವ, ಪುರಸಭಾ ಮಾಜಿ ಸದಸ್ಯ ಪೊನ್ನಸ್ವಾಮಿ, ವೈ.ಎಸ್.ರಾಮಸ್ವಾಮಿ, ಯಜಮಾನ್ ಪೊನ್ನಸ್ವಾಮಿ, ಚಿನ್ನು, ಶ್ರೀನಿವಾಸ್, ಭವಾನಿ, ಆರಕ್ಷಕ ಉಪ ನಿರೀಕ್ಷಕ ಲತೇಶ್ ಕುಮಾರ್, ದಿಲೀಪ, ಮಲ್ಲೇಶ್, ಯತಿರಾಜು, ಸುರೇಶ್, ಸುಬ್ರಹ್ಮಣ್ಯ, ಗೋವಿಂದ, ಅಬ್ಬಯ್ಯ ಮತ್ತಿತರರಿದ್ದರು.