Advertisement

ಜಮ್ಮು ಕಾಶ್ಮೀರದ ಸಾಂಬಾದಲ್ಲಿ ಗೋ ಕಳ್ಳಸಾಗಣೆ: 14 ಗೋವುಗಳ ರಕ್ಷಣೆ

04:33 PM Aug 27, 2018 | Team Udayavani |

ಜಮ್ಮು : ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿಂದು ಗೋ ಕಳ್ಳಸಾಗಣೆ ಯತ್ನವನ್ನು ವಿಫ‌ಲಗೊಳಿಸಲಾಗಿದ್ದು 14 ಗೋವುಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ರಾಷ್ಟ್ರೀಯ ಹೆದ್ದಾರಿಯ ತಾಪ್ಯಾಲ್‌ ಪ್ರದೇಶದಲ್ಲಿಂದು ವೇಗವಾಗಿ ಧಾವಿಸಿಬರುತ್ತಿದ್ದ ಟ್ರಕ್ಕನ್ನು ನಿಲ್ಲಿಸಲು ಪೊಲೀಸರು ಸೂಚಿಸಿದಾಗ ಅದು ನಿಲ್ಲದೆ ಪರಾರಿಯಾಗಲು ಯತ್ನಿಸಿತು. ಟ್ರಕ್‌ ಒಳಗೆ ದನಗಳು ಇರುವುದು ಪತ್ತೆಯಾಯಿತು. 

ಪೊಲೀಸರು ತಮ್ಮನ್ನು ಬೆನ್ನಟ್ಟುವುದನ್ನು ಕಂಡ ಟ್ರಕ್‌ ಚಾಲಕ, ಜತ್ವಾಲ್‌ ಪ್ರದೇವದಲ್ಲಿ  ಒಂದೆಡೆ ಟ್ರಕ್‌ ನಿಲ್ಲಿಸಿ ಪರಾರಿಯಾದ.

ಟ್ರಕ್ಕಿನಲ್ಲಿದ್ದ 14 ದನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಒಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗಗ್ವಾಲ್‌ ಪೊಲೀಸ್‌ ಠಾಣೆಯಲ್ಲಿ  ಈ ಸಂಬಂಧ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next