Advertisement

ಗಡಿ ಅತಿಕ್ರಮಣ ಆಗಿದ್ದು ಯಾರಿಂದ:‌ ಕಾಂಗ್ರೆಸ್‌ ಪ್ರಶ್ನೆ

05:29 AM Jun 21, 2020 | Lakshmi GovindaRaj |

ಬೆಂಗಳೂರು: ಚೀನಿಯರಿಂದ ಗಡಿ ಅತಿಕ್ರಮಣವಾಗಿಲ್ಲ ಎಂದಾದರೆ ಭಾರತೀಯ ಸೈನಿಕರು ಹುತಾತ್ಮರಾಗಿದ್ದು ಹೇಗೆ ಎಂದು ರಾಜ್ಯ ಕಾಂಗ್ರೆಸ್‌ ಪ್ರಶ್ನಿಸಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕೆಪಿಸಿಸಿ, ಚೀನಾದ ಪ್ರಕಾರ ಚೀನಿ ಸೈನಿಕರು ಭಾರತದ ಗಡಿಯನ್ನು ಅತಿಕ್ರಮಿಸಿಲ್ಲ.

Advertisement

ಭಾರತದ ಪ್ರಧಾನಿಯೂ ಅದನ್ನೇ ಹೇಳುತ್ತಾರೆಂದರೆ ಗಡಿಯ ಅತಿಕ್ರಮಣ ಆಗಿದ್ದು ಯಾರಿಂದ? ಭಾರತದ ಗಡಿಯನ್ನು ಯಾರೂ ಅತಿಕ್ರಮಿಸಿರಲಿಲ್ಲವೆಂದ ಮೇಲೆ ನಮ್ಮ ಸೈನಿಕರು  ಹುತಾತ್ಮರಾಗಿದ್ದೇಕೆ? ನಮ್ಮ ಸೈನಿಕರೇ ಚೀನಾದ ಪ್ರದೇಶ ಅತಿಕ್ರಮಣ ಮಾಡಿದರೇ? ಎಂದು ಪ್ರಶ್ನಿಸಿದೆ. ಚೀನಾ ಗಡಿಯ ವಾಸ್ತವತೆ ಬಗ್ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹೇಳಿಕೆಗಳು ಗೊಂದಲ ಮೂಡಿಸು ವಂತಿವೆ. ನಮ್ಮ ದೇಶದ ಯಾವ  ಭಾಗವನ್ನೂ ಚೀನಾ ಅತಿ ಕ್ರಮಣ ಮಾಡಿಲ್ಲ,

ಅದಕ್ಕೆ ಭಾರತೀಯ ಸೇನೆ ಅವಕಾಶವನ್ನೂ ನೀಡುವುದಿಲ್ಲ ಎಂದು ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಲಡಾಖ್‌ ಗಡಿಯಲ್ಲಿರುವ ಗಾಲ್ವಾನ್‌ ಕಣಿವೆಯಲ್ಲಿ ಚೀನಾ  ಮತ್ತು ಭಾರತದ ನಡುವೆ ನಡೆದ ಸಂಘರ್ಷದ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಇನ್ನೂ ಆತಂಕದ ವಾತಾವರಣ ಇದೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next