ಜಮ್ಮು: ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಐವರು ಅಮರನಾಥ ಯಾತ್ರಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಹಾಂತರ ದೇವಾಲಯಕ್ಕೆ ತೆರಳುವ ಎರಡೂ ಮಾರ್ಗ ಬಂದ್ ಆಗಿದ್ದು, ಬುಧವಾರ ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ.
ಬಾಲ್‌ತಾಲ್ ಮತ್ತು ಪಹಲ್‌ಗಾಮ್‌ನ ಮಾರ್ಗಗಳು ಬಂದ್ ಆಗಿದ್ದು, ಭದ್ರತಾ ಪಡೆಗಳು ಯಾತ್ರಿಕರ ಸುರಕ್ಷತೆಗಾಗಿ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ.
ರೈಲ್‌ಪಾತ್ರಿ ಮತ್ತು ಬ್ರಾರಿಮಾರ್ಗ್‌ನಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು , ಯಾತ್ರಿಕರು ಪರದಾಡಬೇಕಾಗಿದೆ.
ಭೂಕುಸಿತ ಸಂಭವಿಸಿದ ಸ್ಥಳಗಳಲ್ಲಿ ಮಾರ್ಗ ಸಂಪೂರ್ಣವಾಗಿ ತೆರವುಗೊಂಡ ಬಳಿಕವೇ ಮತ್ತೆ ಯಾತ್ರೆ ಆರಂಭಿಸುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಮಾರ್ಗವನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುರಕ್ಷತಾ ತಪಾಸಣೆ ಪೂರ್ಣಗೊಂಡ ಬಳಿಕವಷ್ಟೇ ಯಾತ್ರೆ ಆರಂಭವಾಗಲಿದೆ.